ADVERTISEMENT

ನಟಿಗೆ ಲೈಂಗಿಕ ಕಿರುಕುಳ: ಪ್ರಕರಣದಲ್ಲಿ ನಟಿ ಕಾವ್ಯಾ ಮಾಧವನ್ ಕೈವಾಡ?

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2017, 6:51 IST
Last Updated 30 ಆಗಸ್ಟ್ 2017, 6:51 IST
ಪಲ್ಸರ್ ಸುನಿ
ಪಲ್ಸರ್ ಸುನಿ   

ಎರ್ನಾಕುಳಂ: ಬಹುಭಾಷಾ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತನಾಗಿರುವ ಮಲಯಾಳಂ ಸಿನಿಲೋಕದ ಜನಪ್ರಿಯ ನಟ ದಿಲೀಪ್ ಜಾಮೀನು ಮೇಲ್ಮನವಿ ಅರ್ಜಿಯನ್ನು ಕೇರಳ ಹೈಕೋರ್ಟ್‌ ತಿರಸ್ಕರಿಸಿದ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸಂಗತಿಯೊಂದು ಈಗ ಬಹಿರಂಗವಾಗಿದೆ.

ಈ ಪ್ರಕರಣದಲ್ಲಿ ಪ್ರಥಮ ಆರೋಪಿಯಾಗಿರುವ ಪಲ್ಸರ್ ಸುನಿ, ಈ ಪ್ರಕರಣದಲ್ಲಿ ಮೇಡಂ ಕೈವಾಡವಿದೆ ಎಂದು ಹೇಳಿದ್ದರು. ಪ್ರಸ್ತುತ ಪ್ರಕರಣದಲ್ಲಿ ದಿಲೀಪ್ ಬಂಧಿತನಾದ ವೇಳೆಯೇ ಸುನಿ ಹೇಳುತ್ತಿರುವ ಆ ಮೇಡಂ ಯಾರು ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು.

ಬುಧವಾರ ಎರ್ನಾಕುಳಂ ಸಿಜಿಎಂ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದ ವೇಳೆ ಪ್ರಕರಣದಲ್ಲಿ ಭಾಗಿಯಾಗಿರುವ ಆ ಮೇಡಂ ಯಾರು ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

ADVERTISEMENT

ನ್ಯಾಯಾಲಯಕ್ಕೆ ಹೋಗುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸುನಿ ನಾನೊಬ್ಬ ಕಳ್ಳ. ನೀವೆಲ್ಲರೂ ನನ್ನ ಪ್ರಾಯಶ್ಚಿತದ ಮಾತುಗಳನ್ನು ಯಾಕೆ ಕೇಳುತ್ತೀರಿ? 'ಮೇಡಂ ಯಾರು ಎಂಬುದನ್ನು ನಾನು ಮೊದಲೇ  ಸೂಚಿಸಿದ್ದೆ. ಕಾವ್ಯಾ ಅವರ ಹೆಸರನ್ನು ನಾನು ಮೊದಲೇ ಹೇಳಿದ್ದೆ' ಎಂದಿದ್ದಾರೆ.

ಹಾಗಾದರೆ ಆ ಮೇಡಂ ಕಾವ್ಯ ಅವರೇ ಎಂದು ಮಾಧ್ಯಮದವರು ಮತ್ತೊಮ್ಮೆ ಕೇಳಿದಾಗ ನನ್ನ ಮೇಡಂ ಕಾವ್ಯ ಅವರೇ ಆಗಿದ್ದಾರೆ ಎಂದು ಸುನಿ ಪುನರುಚ್ಚರಿಸಿದ್ದಾರೆ.

ನಟಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೇಡಂ ಒಬ್ಬರ ಕೈವಾಡವಿದೆ ಎಂದು ನ್ಯಾಯವಾದಿ ಫೆನಿ ಬಾಲಕೃಷ್ಣನ್ ಅವರು ಈ ಮೊದಲೇ ಹೇಳಿದ್ದರು. ಪಲ್ಸರ್ ಸುನಿಗಾಗಿ ಜಾಮೀನು ಸಲ್ಲಿಸಿದವರು ಈ ವಿಷಯದ ಬಗ್ಗೆ ಸೂಚಿಸಿದ್ದರು ಎಂದಿದ್ದರು ಫೆನಿ.

ಆರೋಪಿ ನಟ ದಿಲೀಪ್ ಮೊದಲ ಪತ್ನಿ ನಟಿ ಮಂಜು ವಾರ್ಯರ್‍‍ಗೆ ವಿಚ್ಛೇದನ ನೀಡಿದ ನಂತರ ನಟಿ ಕಾವ್ಯಾ ಮಾಧವನ್ ಅವರನ್ನು ಮದುವೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.