ಮುಂಬೈ(ಪಿಟಿಐ): ಎರಡು ವರ್ಷಗಳ ಹಿಂದೆ ಇಲ್ಲಿನ ಕೊಲಾಬಾದ ಹೋಟೆಲ್ವೊಂದರಲ್ಲಿ ದಕ್ಷಿಣ ಆಫ್ರಿಕಾ ಮೂಲದ ಉದ್ಯಮಿ ಹಾಗೂ ಆತನ ಮಾವನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಾಲಿವುಡ್ ನಟ ಸೈಫ್ ಅಲಿಖಾನ್ ಮತ್ತು ಇಬ್ಬರು ಸ್ನೇಹಿತರ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ದಾಖಲಾಗಿದೆ.
‘ನ್ಯಾಯಾಲಯವು ಸೈಫ್ ಹಾಗೂ ಇವರ ಸ್ನೇಹಿತರಾದ ಶಕೀಲ್ ಲಡಾಕ್ ಮತ್ತು ಬಿಲಾಲ್ ಅಮ್ರೋಹಿ ಅವರ ವಿರುದ್ಧ ಭಾರತೀಯ
ದಂಡ ಸಂಹಿತೆ ಅನ್ವಯ ದೋಷಾರೋಪ ಪಟ್ಟಿ ದಾಖಲಿಸಿದೆ’ ಎಂದು ಸರ್ಕಾರಿ ವಕೀಲ ವಾಜೀದ್ ಶೇಖ್ ಹೇಳಿದ್ದಾರೆ.
ಆದರೆ ಈ ಮೂವರನ್ನು ಮೆಟ್ರೊ ಪಾಲಿಟನ್ ನ್ಯಾಯಾಲಯ ಆರೋಪ ಮುಕ್ತಗೊಳಿಸಿತ್ತು.
2012 ರ ಫೆ.12 ರಂದು ತಾಜ್ ಹೋಟೆಲ್‌ನ ವಾಸಬಿ ರೆಸ್ಟೋರೆಂಟ್ನಲ್ಲಿ ಸೈಫ್ ಹಾಗೂ ಸ್ನೇಹಿತರು ಹಲ್ಲೆ ನಡೆಸಿದ್ದರ ವಿರುದ್ಧ ಅನಿವಾಸಿ ಭಾರತೀಯ ಇಕ್ಬಾಲ್ ಶರ್ಮಾ ದೂರು ಸಲ್ಲಿಸಿದ್ದರು. ನಂತರ ಮೂವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಸೈಫ್ ಅಲಿಖಾನ್ ತಮ್ಮ ಪತ್ನಿ ಕರೀನಾ ಕಪೂರ್, ಮಲೈಕಾ ಅರೋರಾ, ಅಮೃತಾ ಅರೋರಾ ಹಾಗೂ ಇತರ ಗೆಳೆಯರ ಜತೆ ಹೋಟೆಲ್‌ಗೆ ತೆರಳಿದ್ದ ವೇಳೆ ಗಲಾಟೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.