ADVERTISEMENT

ನರೇಂದ್ರ ಮೋದಿಗೆ ಎಚ್ಚರಿಕೆ ನೀಡಿದ ಆಯೋಗ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2013, 19:30 IST
Last Updated 21 ನವೆಂಬರ್ 2013, 19:30 IST

ನವದೆಹಲಿ: ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಛತ್ತೀಸಗಡ­ದಲ್ಲಿ ಚುನಾವಣಾ ಪ್ರಚಾರ ರ್‍ಯಾಲಿ ವೇಳೆ ಕಾಂಗ್ರೆಸ್‌ ಪಕ್ಷದ ಚಿಹ್ನೆಗೆ ‘ಖೂನಿ ಪಂಜಾ’  (ರಕ್ತಸಿಕ್ತ ಹಸ್ತ)  ಪದ ಬಳಸಿ­ರು­­ವು­ದಕ್ಕೆ ಚುನಾ­ವಣಾ ಆಯೋಗ ಆಕ್ಷೇಪ ವ್ಯಕ್ತ­ಪಡಿಸಿದೆ.

ಇನ್ನು ಮುಂದೆ ಸಾರ್ವಜನಿಕ ಸಭೆಗಳಲ್ಲಿ ಇಂತಹ ಹೇಳಿಕೆ ನೀಡುವಾಗ ಜಾಗರೂಕರಾಗಿ­ರುವಂತೆ ಮೋದಿ ಅವ­ರಿಗೆ ಆಯೋಗ ಗುರುವಾರ ಎಚ್ಚರಿಕೆಯ ಸಂದೇಶ ನೀಡಿದೆ.

ಮೋದಿ ಹೇಳಿಕೆಯನ್ನು ಗಂಭೀರ­ವಾಗಿ ಪರಿಗಣಿಸಿರುವ ಆಯೋಗ, ಚುನಾವಣಾ ನೀತಿ–ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ತಾನು ನೀಡಿದ್ದ ನೋಟಿಸ್‌ಗೆ
ಮೋದಿ ನೀಡಿರುವ ಉತ್ತರ ತನಗೆ ತೃಪ್ತಿ ತಂದಿಲ್ಲ ಎಂದೂ ಅಸಮಾಧಾನ ಸೂಚಿಸಿದೆ. ಈ ಸಂಬಂಧ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.