
ಪ್ರಜಾವಾಣಿ ವಾರ್ತೆನವದೆಹಲಿ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಭಸ್ಮಾಸುರನಿಗೆ ಹೋಲಿಸಿರುವ ಕೇಂದ್ರ ಸಚಿವ ಜೈರಾಂ ರಮೇಶ್, `ಮೋದಿ ಈ ದೇಶದ ಮೊಟ್ಟ ಮೊದಲ ಫ್ಯಾಸಿಸ್ಟ್' ಎಂದೂ ಕಟಕಿಯಾಡಿದ್ದಾರೆ.
`ಭಸ್ಮಾಸುರ ತನ್ನನು ಸೃಷ್ಟಿಸಿದಾತನನ್ನೇ ನಾಶ ಮಾಡಿಲು ಹೊರಟಿದ್ದ. ಅದೇ ರೀತಿ ಮೋದಿ ಕೂಡ ತಮ್ಮ ಗುರು ಎಲ್.ಕೆ.ಅಡ್ವಾಣಿ ಅವರನ್ನು ಮೂಲೆಗುಂಪು ಮಾಡಲು ಹೊರಟಿದ್ದಾರೆ' ಎಂದು ಜೈರಾಂ ಆರೋಪಿಸಿದ್ದಾರೆ.
`ಮುಂಬರುವ ಚುನಾವಣೆಯಲ್ಲಿ ಮೋದಿ ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಲಿದ್ದಾರೆ' ಎಂದೂ ಅವರು ಹೇಳಿದ್ದಾರೆ.
ಇಂಥದ್ದೊಂದು ಹೇಳಿಕೆಯನ್ನು ಇದೇ ಮೊದಲ ಬಾರಿ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿರುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.