ಪುದುಚೇರಿ: `ನಾಟಕ ಅಸಂಬದ್ಧ ಕಲೆಯಲ್ಲ. ಅದೊಂದು ಸಂಯುಕ್ತ ಕಲೆ. ಅದನ್ನೇ ನಾನು ಸ್ಟ್ರಕ್ಚರಲ್ ಮೆಥಡ್ ಎಂದು ಕರೆಯುತ್ತೇನೆ~ ಎಂದು ಪಾಂಡಿಚೇರಿ ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಖ್ಯಾತ ನಾಟಕಕಾರ ರಂಗನಾಥ್ ಭಾರದ್ವಾಜ್ ಅವರು `ನಾಟಕ ಪದ್ಧತಿಯ ಗುಂಟ ನನ್ನ ಪ್ರಯೋಗ~ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಹೇಳಿದರು.
ನಾಟಕ ವಿಭಾಗದ ಮುಖ್ಯಸ್ಥ ಡಾ.ಕೆ.ಎ. ಗುಣಶೇಖರನ್ ಅವರು ಭಾರದ್ವಾಜ್ ಅವರು ನಾಟಕ ಕ್ಷೇತ್ರದಲ್ಲಿ ಅತೀ ದೊಡ್ಡ ಕಾಣಿಕೆ ನೀಡಿದ್ದಾರೆ. ಅವರ ಸ್ಟ್ರಕ್ಚರಲ್ ಮೆಥಡ್ ಅಂತರರಾಷ್ಟ್ರೀಯ ಮಾನ್ಯತೆ ಗಳಿಸಿರುವುದು ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು.
ಸಹ ಪ್ರಾಧ್ಯಾಪಕ ಡಾ. ಪ್ರಭಾತ ಭಾಸ್ಕರನ್ ಅವರು ಭಾರದ್ವಾಜ್ ಅವರನ್ನು ಸನ್ಮಾನಿಸಿದರು. ಡಾ. ರಾಜಾ ರವಿ ವರ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.