ADVERTISEMENT

ನಾಲ್ವರ ಪೈಕಿ ಒಬ್ಬರಲ್ಲಿ ಅಸ್ಪೃಶ್ಯತೆ ಜೀವಂತ!

​ಪ್ರಜಾವಾಣಿ ವಾರ್ತೆ
Published 4 ಮೇ 2015, 11:22 IST
Last Updated 4 ಮೇ 2015, 11:22 IST

ನವದೆಹಲಿ (ಪಿಟಿಐ): ಅಸ್ಪೃಶ್ಯತೆ ನಿವಾರಣೆ ಕಾಯ್ದೆ ಜಾರಿಗೊಂಡು 65 ವರ್ಷ ಉರುಳಿವೆ. ಈಗಲೂ ನಾಲ್ವರು ಭಾರತೀಯರ ಪೈಕಿ ಒಬ್ಬರು ಒಂದಿಲ್ಲೊಂದು ಬಗೆಯಲ್ಲಿ ತಮ್ಮ ಮನೆಗಳಲ್ಲಿ ಅಸ್ಪೃಶ್ಯತೆಯನ್ನು ಪಾಲಿಸುತ್ತಿದ್ದಾರೆ ಎಂಬ ಅಂಶವನ್ನು ಪ್ಯಾನ್ ಇಂಡಿಯಾ ಸಮೀಕ್ಷೆ ಹೊರಗೆವಿದೆ.

ಮುಸ್ಲಿಮರು, ಕ್ರೈಸ್ತರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸೇರಿದಂತೆ ಅಕ್ಷರಶಃ ಎಲ್ಲಾ ಜಾತಿ ಹಾಗೂ ಧರ್ಮದವರು ಅಸ್ಪೃಶ್ಯತೆಯನ್ನು ಪಾಲಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಭಾರತ ಮಾನವಾಭಿವೃದ್ಧಿ ಸಮೀಕ್ಷೆ (ಐಎಚ್‌ಡಿಎಸ್‌–2) ಹೇಳಿದೆ.

ಅನ್ವಯಿಕ ಆರ್ಥಿಕ ಸಂಶೋಧನೆಯ ರಾಷ್ಟ್ರೀಯ ಮಂಡಳಿ (ಎನ್‌ಸಿಎಇಆರ್‌) ಹಾಗೂ ಅಮೆರಿಕದ ಮೇರಿಲ್ಯಾಂಡ್‌ ವಿಶ್ವವಿದ್ಯಾಲಯ ಈ ಸಮೀಕ್ಷೆ ನಡೆಸಿದ್ದು, ಈ ವರ್ಷಾಂತ್ಯದ ಬಳಿಕ ಪೂರ್ಣ ಪ್ರಮಾಣದ ವರದಿ ಬಿಡುಗಡೆಯಾಗಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.