ಬೆಂಗಳೂರು: ಥಾಯ್ಲೆಂಡ್‌ನ ‘ಥಾಯ್ ಕನ್ನಡ ಬಳಗ’ ಆಶ್ರಯದಲ್ಲಿ ಈ ತಿಂಗಳ 3ರಂದು‘ಯುಗಾದಿ ಅಂತರರಾಷ್ಟ್ರೀಯ ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮ ಬ್ಯಾಂಕಾಕ್‌ನಲ್ಲಿ ನಡೆಯಲಿದೆ.
ಈ ಸಾಂಸ್ಕೃತಿಕ ಉತ್ಸವಕ್ಕೆ ಡೊಳ್ಳುಕುಣಿತದ ಮೂಲಕ ನಾಂದಿ ಹಾಡಲಿದ್ದಾರೆ ಸಾಗರದ ಸ್ನೇಹ ಮಹಿಳಾ ಮಂಡಳಿ ಸದಸ್ಯೆಯರು. ಬೆಂಗಳೂರಿನ ಕೆ. ನಾಗಲಕ್ಷ್ಮೀ, ಮಾಸ್ಟರ್ ಅರ್ಜುನ್ ಅವರಿಂದ ನೃತ್ಯ, ಕಿಕ್ಕೇರಿ ಕೃಷ್ಣಮೂರ್ತಿ, ಗಣೇಶ ಪಾಟೀಲ್ ಹಾಗೂ ರವೀಂದ್ರನಾಥ್ ಅವರಿಂದ ಗಾಯನ ಕಾರ್ಯಕ್ರಮ. ಮಣಿಪಾಲದ ಕಮಲಾಕ್ಷ ಪ್ರಭು ಅವರ ತಂಡದಿಂದ ಯಕ್ಷಗಾನ ಕಾರ್ಯಕ್ರಮ ನಡೆಯಲಿವೆ ಎಂದು ಬಳಗದ ಅಧ್ಯಕ್ಷ ವಿನ್ಸೆಂಟ್ ಪಿಂಟೊ ಹಾಗೂ ಮಂಗಳೂರಿನ ಕೆ.ಪಿ.ಮಂಜುನಾಥ್ ಸಾಗರ್ ಅವರು ತಿಳಿಸಿದ್ದಾರೆ.
ಬ್ಯಾಂಕಾಕ್‌ನ ನೊವೆಟಲ್ ಲೋಟಸ್ ಹೋಟೆಲ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.