ಚೆನ್ನೈನಿಂದ ವಿಶೇಷ ವಿಮಾನದಲ್ಲಿ ಬರುವ ಜಯಲಲಿತಾ ಅವರು ಎಚ್‌ಎಎಲ್ ನಿಲ್ದಾಣದಲ್ಲಿ ಇಳಿಯುವರು. ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ಸಭೆಗೆ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದಲ್ಲಿನ ನೀರಿನ ಲಭ್ಯತೆ, ಮಳೆ, ಬೆಳೆ ಪರಿಸ್ಥಿತಿ ಬಗ್ಗೆ ಜಯಲಲಿತಾ ಮತ್ತು ಅವರೊಂದಿಗೆ ಬರಲಿರುವ ನೀರಾವರಿ ತಜ್ಞರಿಗೆ ಮನವರಿಕೆ ಮಾಡಿಕೊಡಲು ರಾಜ್ಯದ ನೀರಾವರಿ ತಜ್ಞರು ಕಸರತ್ತು ನಡೆಸಿದ್ದಾರೆ.
ನೀರಿನ ಲಭ್ಯತೆ ಮತ್ತು ಬೆಳೆದು ನಿಂತಿರುವ ಬೆಳೆ ಹಾಗೂ ಕುಡಿಯುವ ಸಲುವಾಗಿ ಎಷ್ಟು ಪ್ರಮಾಣದ ನೀರು ಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪರಿಹಾರದ ಕಡೆ ಗಮನ: `ಈ ಸಭೆ ಯಶಸ್ವಿಯಾದರೆ ದೇಶದ ಅಂತರ್‌ರಾಜ್ಯ ಜಲ ವಿವಾದಗಳಿಗೆ ಮಾದರಿ ಆಗಲಿದೆ' ಎಂದು ಕಾನೂನು ಸಚಿವ ಎಸ್.ಸುರೇಶಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.