ADVERTISEMENT

ನಿರ್ದೇಶಕ ಭೀಮಸೇನ್‌ ನಿಧನ

ಪಿಟಿಐ
Published 18 ಏಪ್ರಿಲ್ 2018, 19:30 IST
Last Updated 18 ಏಪ್ರಿಲ್ 2018, 19:30 IST
ಭೀಮಸೇನ್ ಖುರಾನ
ಭೀಮಸೇನ್ ಖುರಾನ   

ಮುಂಬೈ: ‘ಘರೋಂಡಾ’ ಚಲನಚಿತ್ರದಿಂದ ಹೆಸರುವಾಸಿಯಾಗಿದ್ದ ನಿರ್ದೇಶಕ, ಅನಿಮೇಷನ್‌ ಪ್ರವರ್ತಕ ಭೀಮಸೇನ್‌ ಖುರಾನ (81) ಮೂತ್ರಪಿಂಡ ವೈಫಲ್ಯದಿಂದ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ ಹೆಂಡತಿ ನೀಲಂ ಮತ್ತು ಇಬ್ಬರು ಮಕ್ಕಳಾದ ಹಿಮಾಂಶು, ಕಿರೀಟ್ ಖುರಾನ ಇದ್ದಾರೆ.

ದೂರದರ್ಶನ (ಡಿಡಿ1) ವಾಹಿನಿ ಮಾತ್ರ ಇದ್ದ ಕಾಲಘಟ್ಟದಲ್ಲಿ, ಅನಿಮೇಷನ್‌ ತಂತ್ರಜ್ಞಾನ ಬಳಸಿ ಟಿವಿ ಮತ್ತು ಕಿರುಚಿತ್ರ ಮಾಧ್ಯಮಗಳನ್ನು ಸಮೃದ್ಧಗೊಳಿಸಿದ ಶ್ರೇಯ ಭೀಮಸೇನ್‌ ಅವರಿಗೆ ಸಲ್ಲುತ್ತದೆ.

‘ಏಕ್‌ ಅನೇಕ್‌ ಏಕ್ತಾ’, ಅನಿಮೇಷನ್‌ ಕಿರುಚಿತ್ರ ಮತ್ತು ಅದರ ಗೀತೆ ’ಏಕ್‌ ಚಿಡಿಯಾ, ಅನೇಕ್ ಚಿಡಿಯಾ’ ಬಹು ಜನಪ್ರಿಯಗೊಂಡಿವೆ.’ಏಕ್‌–ದೋ’, ‘ಫೈರ್‌’, ‘ಮುನ್ನಿ’, ‘ಫ್ರೀಡಂ ಈಸ್‌ ಎ ಥಿನ್‌ ಲೈ’, ‘ಮೆಹ್ಮಾನ್‌’, ‘ಕಹಾನಿ ಹರ್‌ ಜಮಾನೆ ಕಿ’ ಸೇರಿದಂತೆ ಹಲವು ಕಿರುಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.