ನವದೆಹಲಿ: ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿರುವ ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ತಮ್ಮ ಜನ್ಮ ದಿನಾಂಕ 1950ಕ್ಕೆ ಬದಲಾಗಿ 1951 ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದರೂ, ತಮ್ಮ ಮನವಿಯನ್ನು ಸರ್ಕಾರ ಮಾನ್ಯ ಮಾಡಿಲ್ಲ ಎಂದಿರುವ ಸಿಂಗ್, ಸರ್ಕಾರವನ್ನು ಸುಪ್ರೀಂ ಕೋರ್ಟಿಗೆ ಎಳೆದಿದ್ದಾರೆ. ಒಂದೊಮ್ಮೆ ಕೋರ್ಟ್ ಸಿಂಗ್ ಅವರ ಜನ್ಮ ದಿನಾಂಕದ ವರ್ಷವನ್ನು 1951 ಎಂದು ಪರಿಗಣಿಸಿ ತೀರ್ಪು ನೀಡಿದರೆ ಇನ್ನೂ ಹತ್ತು ತಿಂಗಳ ಸೇವಾವಧಿ ಸಿಗಲಿದೆ. ಸದ್ಯಕ್ಕೆ ಸಿಂಗ್ ಅವರು ಈ ವರ್ಷದ ಮೇ 31ರಂದು ನಿವೃತ್ತರಾಗಲಿದ್ದಾರೆ.
ರಕ್ಷಣಾ ಇಲಾಖೆ ಸಿಂಗ್ ಅವರ ಜನ್ಮ ದಿನಾಂಕದ ವರ್ಷವನ್ನು 1951 ಎಂದು ಪರಿಗಣಿಸಿದರೆ, ಸೇನಾ ಮುಖ್ಯಸ್ಥರ ಆಯ್ಕೆಯಲ್ಲಿಯೂ ಬದಲಾವಣೆ ಆಗಲಿದೆ. ತಮ್ಮ ಆತ್ಮ ಗೌರವ ಮತ್ತು ಸಮಗ್ರತೆಯ ಮೇಲೆಯೇ ಈ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.