ADVERTISEMENT

ನೀಟ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೋಷಕರಿಗೆ ಮಸೀದಿಯಲ್ಲಿ ಆಶ್ರಯ

​ಪ್ರಜಾವಾಣಿ ವಾರ್ತೆ
Published 7 ಮೇ 2018, 6:28 IST
Last Updated 7 ಮೇ 2018, 6:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರಂ: ಕಳೆದ ವರ್ಷ ಮೇ 7, ಭಾನುವಾರದಂದು ಮಸೀದಿಯಲ್ಲಿ ಪಾರ್ಥನೆ ಮುಗಿಸಿ ಹೊರಬಂದಾಗ ಮುಹಮ್ಮದ್ ನವಾಜ್ ಅವರಿಗೆ ಶಿವಗಿರಿ ಶಾಲೆ ಮುಂದೆ ಹಲವಾರು ಮಂದಿ ಕಾಯುತ್ತಾ ಕುಳಿತಿರುವುದು ಕಂಡಿತ್ತು. ನೀಟ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೋಷಕರು ಪರೀಕ್ಷೆ ಮುಗಿಯುವವರೆಗೆ ಬಿಸಿಲಿನಲ್ಲಿ ಕಾಯುತ್ತಾ ಕುಳಿತಿರುವುದನ್ನು ಕಂಡ ನವಾಜ್ ಅವರನ್ನೆಲ್ಲ ಮಸೀದಿಗೆ ಆಹ್ವಾನಿಸಿ, ಅಲ್ಲಿ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ವಾದಿ ಹಿರಾ ಟ್ರಸ್ಟ್ ನ ಕಾರ್ಯದರ್ಶಿಯಾಗಿದ್ದ ನವಾಜ್, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೋಷಕರಿಗೆ ಮಸೀದಿಯಲ್ಲಿ ಆತಿಥ್ಯ ನೀಡಿದ್ದರು.

ಈ ಬಾರಿಯೂ ವಿದ್ಯಾರ್ಥಿಗಳ ಪೋಷಕರಿಗೆ ಆತಿಥ್ಯ ನೀಡುವುದಕ್ಕೆ ಮಸೀದಿ ಸಜ್ಜಾಗಿತ್ತು. ವಾದಿ ಹಿರಾ ಟ್ರಸ್ಟ್ ಮತ್ತು ಅಲ್ಲಿನ ಸ್ಥಳೀಯರು ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪೋಷಕರಿಗಾಗಿ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ಮಾಡಿದ್ದರು. ವಿದ್ಯಾರ್ಥಿಗಳ ಪೋಷಕರು ಪರೀಕ್ಷೆ ಮುಗಿಯುವ ವರೆಗೆ ಮಸೀದಿಯಲ್ಲಿಯೇ ವಿಶ್ರಾಂತಿ ಪಡೆದಿದ್ದಾರೆ.
ವಿಶೇಷ ಏನೆಂದರೆ ಈ ಬಾರಿ 1,200 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳ ಪೋಷಕರಿಗೆ ಇಲ್ಲಿ ಆತಿಥ್ಯ ನೀಡಲಾಗಿತ್ತು. ಇಲ್ಲಿ ಬಂದವರಲ್ಲಿ ತಮಿಳುನಾಡು ಸೇರಿದಂತೆ ಬೇರೆ ರಾಜ್ಯದವರೂ ಇದ್ದರು.

</p><p>ತೊಟ್ಟುಮುಖಂ ಶಿವಗಿರಿ ಶಾಲೆ ಮತ್ತು ಚಲಕ್ಕಲ್ ಅಮಲ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆ ದಿನಾಂಕ ತಿಳಿದಿದ್ದರಿಂದ ನಾವು ಹತ್ತಿರದ ಮನೆ ಮತ್ತು ಅಂಗಡಿಗಳಲ್ಲಿ ಎಲ್ಲ ವ್ಯವಸ್ಥೆ ಮಾಡಿದ್ದೆವು ಎಂದು ಆಲುವಾದ ವಿದ್ಯಾರ್ಥಿ ಸಂಘದ ಕಾರ್ಯಕರ್ತ ಅಬ್ದುಲ್ ರಹೂಫ್ ಇಬನ್ ರೆಹಮಾನ್ ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.<br/>&#13; ಮಸೀದಿಯಲ್ಲಿ ಒಳ್ಳೆಯ ಕೆಲಸ ಮಾಡಿದ್ದಕ್ಕೆ ಒಳ್ಳೆಯದೇ ಆಗುತ್ತದೆ. ಇಸ್ಲಾಂ ಧರ್ಮದಲ್ಲಿ ಇದು ದೊಡ್ಡ ಕೆಲಸ ಎಂದು ಮಸೀದಿಯ ಸದಸ್ಯರೊಬ್ಬರು ಹೇಳಿದ್ದಾರೆ.</p></p>

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.