ADVERTISEMENT

ನೀರವ್‌ ಮೋದಿ ವಿರುದ್ಧ ಮುಂಬೈ ವಿಶೇಷ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್‌

ಏಜೆನ್ಸೀಸ್
Published 12 ಜೂನ್ 2018, 13:22 IST
Last Updated 12 ಜೂನ್ 2018, 13:22 IST
ನೀರವ್‌ ಮೋದಿ ವಿರುದ್ಧ ಮುಂಬೈ ವಿಶೇಷ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್‌
ನೀರವ್‌ ಮೋದಿ ವಿರುದ್ಧ ಮುಂಬೈ ವಿಶೇಷ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್‌   

ಮುಂಬೈ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹13,000 ಕೋಟಿ ಸಾಲ ಮರುಪಾವತಿಸದೆ ವಂಚನೆ ಎಸಗಿ ಪರಾರಿಯಾಗಿರುವ ವಜ್ರದ ಉದ್ಯಮಿ ನೀರವ್‌ ಮೋದಿ ವಿರುದ್ಧ ಮುಂಬೈ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರಂಟ್‌ ಜಾರಿ ಮಾಡಿದೆ.

ಮುಂಬೈನ ಪಿಎಂಎಲ್‌ಎ ವಿಶೇಷ ನ್ಯಾಯಾಲಯ ಮಂಗಳವಾರ ವಾರಂಟ್‌ ಜಾರಿ ಮಾಡಿ ಆದೇಶಿಸಿದೆ.

ವಿದೇಶಕ್ಕೆ ಪರಾರಿಯಾಗಿರುವ ನೀರವ್‌ ಮೋದಿ ವಿರುದ್ಧ ತ್ವರಿತವಾಗಿ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸುವಂತೆ ಇಂಟರ್‌ಪೋಲ್‌ಗೆ ಸಿಬಿಐ ಸೋಮವಾರವಷ್ಟೇ ಮನವಿ ಮಾಡಿತ್ತು. ಇದರ ಬೆನ್ನಲ್ಲೇ ನ್ಯಾಯಾಲಯ ಈ ಆದೇಶ ಮಾಡಿದೆ.

ADVERTISEMENT

‘ಪಿಎನ್‌ಬಿ ಹಗರಣದ ಸಂಚುಕೋರ ನೀರವ್‌ ಮೋದಿ ಬ್ರಿಟನ್‌ನಲ್ಲಿ ಇರುವುದನ್ನು ಅಲ್ಲಿನ ಸರ್ಕಾರ ಖಚಿತಪಡಿಸಿದೆ. ಅವರನ್ನು ದೇಶಕ್ಕೆ ಆದಷ್ಟು ಬೇಗ ಹಸ್ತಾಂತರಿಸಲು ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆಯನ್ನೂ ನೀಡಿದೆ’ ಎಂದು ಸಿಬಿಐ ಮೂಲಗಳು ತಿಳಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.