ADVERTISEMENT

ನೋಟು ರದ್ದತಿ: ನವೆಂಬರ್ 8ಕ್ಕೆ ವಿರೋಧ ಪಕ್ಷಗಳಿಂದ ‘ಕರಾಳ ದಿನ’ ಆಚರಣೆ

ಏಜೆನ್ಸೀಸ್
Published 24 ಅಕ್ಟೋಬರ್ 2017, 13:08 IST
Last Updated 24 ಅಕ್ಟೋಬರ್ 2017, 13:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೊಡ್ಡ ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿ ನವೆಂಬರ್ 8ಕ್ಕೆ ಒಂದು ವರ್ಷ ಆಗಲಿರುವುದರಿಂದ ಆ ದಿನವನ್ನು ‘ಕರಾಳ ದಿನ’ ಎಂದು ಆಚರಿಸುವುದಾಗಿ ವಿರೋಧ ಪಕ್ಷಗಳು ಹೇಳಿವೆ. ಜತೆಗೆ, ನೋಟು ರದ್ದಿನಿಂದ ಆರ್ಥಿಕತೆಯ ಮೇಲೆ ಉಂಟಾದ ದುಷ್ಪರಿಣಾಮಗಳನ್ನು ಎತ್ತಿ ತೋರಿಸುವ ಸಲುವಾಗಿ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿಯೂ ತಿಳಿಸಿವೆ.

ವಿರೋಧ ಪಕ್ಷಗಳ ಸಮನ್ವಯ ಸಮಿತಿಯ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಅವರು, ‘ನೊಟು ರದ್ದತಿಯು ಎನ್‌ಡಿಎ ಸರ್ಕಾರದ ಅಸಮರ್ಪಕ ಗ್ರಹಿಕೆಯ ಮತ್ತು ಆತುರದ ನಿರ್ಧಾರ’ ಎಂದು ಟೀಕಿಸಿದ್ದಾರೆ.

‘ಇದು ಒಂದು ಹಗರಣ ಎಂದೇ ಹೇಳಬಹುದು. ಹದಿನೆಂಟು ವಿರೋಧ ಪಕ್ಷಗಳು ತಮ್ಮ ಶಕ್ತಿಗನುಗುಣವಾಗಿ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.