ADVERTISEMENT

ನ್ಯಾ.ಗಂಗೂಲಿ ವಿರುದ್ಧ ಹೊಸ ತನಿಖೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST

ನವದೆಹಲಿ/ಕೋಲ್ಕತ್ತ (ಪಿಟಿಐ):   ನಿವೃತ್ತ ನ್ಯಾಯಮೂರ್ತಿ ಎ.ಕೆ. ಗಂಗೂಲಿ  ವಿರುದ್ಧದ  ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸುಪ್ರೀಂ­ಕೋರ್ಟ್‌­ನಿಂದ ಮತ್ತೊಮ್ಮೆ ತನಿಖೆ  ಮಾಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಗಂಗೂಲಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬರೆದ ಎರಡು ಪತ್ರ­ಗಳನ್ನು  ರಾಷ್ಟ್ರಪತಿ   ಕೇಂದ್ರ ಗೃಹ ಸಚಿವಾ­ಲಯಕ್ಕೆ ಕಳಿಸಿದ್ದರು. ಇದರಿಂದಾಗಿ ಒತ್ತಡಕ್ಕೆ ಒಳಗಾಗಿರುವ ಸರ್ಕಾರ ಹೊಸದಾಗಿ ತನಿಖೆಗೆ ಮುಂದಾಗಿದೆ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿ­ಸಿದಂತೆ  ಕೇಂದ್ರ ಗೃಹ ಸಚಿವಾಲಯ ಮಂಗಳ­ವಾರ ಕಾನೂನು   ಸಚಿವಾ­ಲಯದ ಸಲಹೆ ಕೋರಿದೆ. ಈ ನಡುವೆ ಗಂಗೂಲಿ ವಿರುದ್ಧ ದೆಹಲಿ ಪೊಲೀ­ಸರು ಕ್ರಿಮಿನಲ್‌ ಮೊಕದ್ದಮೆ ದಾಖ ಲಿಸ­ಬಹುದೆ ಎಂಬ ಜಿಜ್ಞಾಸೆಯೂ ನಡೆದಿದೆ.

ಮತ್ತೊಂದು ಸುದ್ದಿ ...
*
ತೆಗೆದು ಹಾಕುವ ಅಧಿಕಾರ ಯಾರಿಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.