ADVERTISEMENT

ಪಂಚಕುಲಾ ಹಿಂಸಾಚಾರ: ತಪ್ಪೊಪ್ಪಿಕೊಂಡ ಹನಿಪ್ರೀತ್‌ ಇನ್ಸಾನ್‌

ಏಜೆನ್ಸೀಸ್
Published 11 ಅಕ್ಟೋಬರ್ 2017, 10:29 IST
Last Updated 11 ಅಕ್ಟೋಬರ್ 2017, 10:29 IST
ಪಂಚಕುಲಾ ಹಿಂಸಾಚಾರ: ತಪ್ಪೊಪ್ಪಿಕೊಂಡ ಹನಿಪ್ರೀತ್‌ ಇನ್ಸಾನ್‌
ಪಂಚಕುಲಾ ಹಿಂಸಾಚಾರ: ತಪ್ಪೊಪ್ಪಿಕೊಂಡ ಹನಿಪ್ರೀತ್‌ ಇನ್ಸಾನ್‌   

ಪಂಚಕುಲಾ: ಪಂಚಕುಲಾದಲ್ಲಿ ಆಗಸ್ಟ್‌ 25ರಂದು ನಡೆದಿದ್ದ ಹಿಂಸಾಚಾರದಲ್ಲಿ ತನ್ನ ಪಾತ್ರವಿರುವುದನ್ನು ಹನಿಪ್ರೀತ್‌ ಸಿಂಗ್‌ ಇನ್ಸಾನ್‌ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹರಿಯಾಣದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಎದುರು ಹನಿಪ್ರೀತ್‌ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಮೂಲಗಳು ಹೇಳಿವೆ.

ಅಕ್ಟೋಬರ್‌ 13ರವರೆಗೆ ಆಕೆಯನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಪೊಲೀಸರು ಆಕೆಯನ್ನು 9 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಆಕೆಯನ್ನು ಮೂರು ದಿನಗಳ ಕಾಲ ಮಾತ್ರ ಪೊಲೀಸರ ವಶಕ್ಕೆ ನೀಡಿದೆ. ಅಕ್ಟೋಬರ್‌ 3ರಂದು ಹನಿಪ್ರೀತ್‌ ಬಂಧನವಾಗಿತ್ತು.

ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್ ಸಿಂಗ್‌ ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿದ ದಿನ (ಆ.25) ಪಂಚಕುಲಾದಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 40 ಮಂದಿ ಮೃತಪಟ್ಟಿದ್ದರು.

ADVERTISEMENT

ತನ್ನನ್ನು ಗುರ್ಮೀತ್‌ನ ದತ್ತು ಪುತ್ರಿ ಎಂದು ಕರೆದುಕೊಂಡಿರುವ ಹನಿಪ್ರೀತ್‌ ಇನ್ಸಾನ್‌ ವಿರುದ್ಧ ಹರಿಯಾಣ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಪಂಚಕುಲಾದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹನಿಪ್ರೀತ್‌ ವಿರುದ್ಧ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.