ADVERTISEMENT

ಪಂಜಾಬ್: ಪ್ರಮಾಣ ವಚನ ಸ್ವೀಕರಿಸಿದ ಬಾದಲ್

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 6:05 IST
Last Updated 14 ಮಾರ್ಚ್ 2012, 6:05 IST

 ಚಂಡೀಗಡ, (ಐಎಎನ್ಎಸ್): ಇಲ್ಲಿಂದ 20 ಕಿ.ಮೀ ದೂರದ ಸಿಖ್ಖರ ಯುದ್ಧಭೂಮಿ ಮೊಹಾಲಿಯ ಚಪ್ಪರ್ ಛಿರಿ ಎಂಬ ಐತಿಹಾಸಿಕ ತಾಣದಲ್ಲಿ ಪ್ರಕಾಶ್ ಸಿಂಗ್ ಬಾದಲ್ ಅವರು ಐದನೇ ಬಾರಿ ಪಂಜಾಬ್ ರಾಜ್ಯದ ಮುಖ್ಯಮಂತ್ರಿಯಾಗಿ ಬುಧವಾರ ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಿದರು.

ಎಂಬತ್ನಾಲ್ಕು ವಸಂತಗಳ ಹಿರಿಯ ಬಾದಲ್ ಅವರು ಪಂಜಾಬಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಅವರು ರಾಜ್ಯ ಕಾಣುತ್ತಿರುವ ಅತ್ಯಂತ ಹಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಪಂಜಾಬ್ ನ ರಾಜ್ಯಪಾಲ ಶಿವರಾಜ್ ಪಾಟೀಲ್ ಅವರು, ಸಹಸ್ರಾರು ಜನರು ಮತ್ತು ಹಿರಿಯ ರಾಜಕಾರಣಿಗಳ ಉಪಸ್ಥಿತಿಯಲ್ಲಿ ಬಾದಲ್ ಅವರ ಪ್ರಮಾಣ ವಚನದ ಪ್ರತಿಜ್ಞಾವಿಧಿ  ನೆರವೇರಿಸಿದರು. 

ADVERTISEMENT

ಈ ಮೊದಲು ಬಾದಲ್ ಅವರು 1969,1977, 1997 ಮತ್ತು 2007ರಲ್ಲಿ ಮುಖ್ಯಮಂತ್ರಿಗಳಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.