ADVERTISEMENT

ಪಕ್ಷಭೇದ ಮರೆತು ಸಂಸದರ ಅತೃಪ್ತಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ತೀರ್ಪಿನ ಬಗ್ಗೆ ಸಂಸದರು ಪಕ್ಷಭೇದ ಮರೆತು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ‘ಈ ತೀರ್ಪು ನನಗೆ ಸಮ್ಮತವಲ್ಲ. ಹೈಕೋರ್ಟ್‌ ತೀರ್ಪು ಹೆಚ್ಚು ವೈಜ್ಞಾನಿಕವಾಗಿತ್ತು’ ಎಂದು ಜೆಡಿಯು ನಾಯಕ ಶಿವಾನಂದ ತಿವಾರಿ ಸಂಸತ್‌ನ ಹೊರಗೆ ಮಾತನಾಡುತ್ತಾ ಹೇಳಿದ್ದಾರೆ. ಖ್ಯಾತ ಬರಹಗಾರ ವಿಕ್ರಮ್‌ ಸೇಥ್‌ ಮತ್ತು ಆಮ್‌ ಆದ್ಮಿ ಪಕ್ಷದ ಮುಖಂಡ ಪ್ರಶಾಂತ್‌ ಭೂಷಣ್‌ ಕೂಡ ತೀರ್ಪಿನ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ತೀರ್ಪಿಗೆ ಮೆಚ್ಚುಗೆ: ಹೈಕೋರ್ಟ್ ಆದೇಶ­­­ವನ್ನು ಪ್ರಶ್ನಿಸಿದವರಲ್ಲಿ ಒಬ್ಬ­ರಾದ ಪ್ರಯಾಸ್‌ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಮೋದ್‌ ಕಾಂತ್‌ ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗ­ತಿಸಿದ್ದಾರೆ. ಪುರುಷರು ಮತ್ತು ಗಂಡು ಮಕ್ಕಳ ವಿರುದ್ಧದ ಲೈಂಗಿಕ ಶೋಷಣೆಗೆ ಇರುವ ಏಕೈಕ ರಕ್ಷಣೆ ಸೆಕ್ಷನ್‌ 377 ಎಂಬುದು ಅವರ ಅಭಿಪ್ರಾಯ­ವಾಗಿದೆ. ಯೋಗಗುರು ರಾಮ­ದೇವ್‌ ತೀರ್ಪನ್ನು ಸ್ವಾಗತಿಸಿದ್ದು, ಇದು ದೇಶದ ಜನರ ಧಾರ್ಮಿಕ ಭಾವನೆಗಳನ್ನು ಗೌರವಿಸಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.