ADVERTISEMENT

ಪತ್ರಕರ್ತ ರಾಜ್‌ದಿಯೋ ರಂಜನ್ ಕೊಲೆ ಪ್ರಕರಣ : ಆರ್‌ಜೆಡಿ ನಾಯಕ ತೇಜ್‌ಪಾಲ್‌ ಯಾದವ್‌ಗೆ ಕ್ಲೀನ್‌ ಚಿಟ್

ಏಜೆನ್ಸೀಸ್
Published 22 ಮಾರ್ಚ್ 2018, 11:20 IST
Last Updated 22 ಮಾರ್ಚ್ 2018, 11:20 IST
ತೇಜ್‌ಪಾಲ್‌ ಯಾದವ್
ತೇಜ್‌ಪಾಲ್‌ ಯಾದವ್   

ನವದೆಹಲಿ: ಪತ್ರಕರ್ತ ರಾಜ್‌ದಿಯೋ ರಂಜನ್ ಕೊಲೆ ಪ್ರಕರಣ ಸಂಬಂಧ  ರಾಷ್ಟ್ರೀಯ ಜನತಾ ದಳದ(ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್‌ಪಾಲ್‌ ಯಾದವ್ ಅವರಿಗೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿದೆ.

ತೇಜ್‌ಪಾಲ್‌ ಯಾದವ್ ವಿರುದ್ಧ ಸಿಬಿಐಗೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್‌ ಲೇಖಿ ಅವರು ಸುಪ್ರೀಂಗೆ ಹೇಳಿದ್ದರು. ಇದನ್ನಾಧರಿಸಿ ಮುಖ್ಯ ನ್ಯಾಯಾಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಯಾದವ್ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಿದೆ.

ತೇಜ್‌ಪಾಲ್ ಯಾದವ್ ಅವರನ್ನು ಮುಕ್ತಗೊಳಿಸಿದ ಸುಪ್ರೀಂ, ‘ಈ ಪ್ರಕರಣ ಸಂಬಂಧ ಭವಿಷ್ಯದಲ್ಲಿ ಯಾವುದಾದರೂ ಅಪರಾಧ ಸಂಬಂಧ ಸಾಕ್ಷ್ಯಾಧಾರಗಳು ಲಭಿಸಿದ್ದಲ್ಲಿ ರಾಜ್‌ದಿಯೋ ರಂಜನ್ ಅವರ ಪತ್ನಿ ಆಶಾ ರಂಜನ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಮರು ಪರಿಶೀಲಿಸಬಹುದು’ ಎಂದು ಹೇಳಿದೆ.

ADVERTISEMENT

ಮೃತ  ಪತ್ರಕರ್ತ ರಾಜ್‌ದಿಯೋ ರಂಜನ್ ಅವರು ಹಿಂದಿ ಪತ್ರಿಕೆಯೊಂದರ ಸಿವಾನಿನ ವಿಭಾಗ ಮುಖ್ಯಸ್ಥರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.