ADVERTISEMENT

ಪದ್ಮ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 14:18 IST
Last Updated 20 ಏಪ್ರಿಲ್ 2013, 14:18 IST

ನವದೆಹಲಿ (ಪಿಟಿಐ): ರಾಷ್ಟ್ರಪತಿ ಭವನದಲ್ಲಿ ಶನಿವಾರ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಉದ್ಯಮಿ ಆದಿ ಗೋದ್ರೆಜ್, ಒಲಿಂಪಿಕ್‌ನಲ್ಲಿ ಪದಕ ವಿಜೇತ ಯೋಗೇಶ್ವರ್ ದತ್, ವಿಜಯ್ ಕುಮಾರ್ ಮತ್ತು ನಟ ನಾನಾ ಪಾಟೇಕರ್ ಸೇರಿದಂತೆ ಪ್ರಮುಖರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದರು.

ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು:
ಪ್ರೊ. ರೊದ್ದಮ್ ನರಸಿಂಹ, ಅಂತರರಾಷ್ಟ್ರೀಯ ಕೊಳಲು ವಾದಕ ಸೈಯದ್ ಹೈದರ್ ರಝ.

ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರು:
ವಿಜ್ಞಾನಿ ಪ್ರೊ. ಸತ್ಯನಾಥಮ್ ಅಟ್ಲುರಿ, ಸಂಶೋಧಕ ಡಾ. ಮಹಾರಾಜ್ ಕಿಶನ್ ಭಾನ್, ಉದ್ಯಮಿ ಆದಿ ಗೋದ್ರೆಜ್, ಗಾಯಕ ಉಸ್ತಾದ್ ಅಬ್ದುಲ್ ರಶೀದ್ ಖಾನ್, ಡಾ. ನಂದಕಿಶೋರ್ ಶಾಮರಾವ್ ಲೌದ್, ಮಂಗೇಶ್ ಪಡಗಾಂವ್‌ಕರ್, ವಿಜ್ಞಾನಿಗಳಾದ ಡಾ. ಎ.ಎಸ್ ಪಿಳ್ಳೈ ಹಾಗೂ ಬಿ.ಎನ್. ಸುರೇಶ್ ಹಾಗೂ ಭರತನಾಟ್ಯ ಕಲಾವಿದೆ ಡಾ. ಸರೋಜ ವಿದ್ಯಾನಾಥನ್

ADVERTISEMENT

ಜಸ್ಪಾಲ್ ಸಿಂಗ್ ಭಟ್ಟಿ ಹಾಗೂ ನಟ ರಾಜೇಶ್ ಖನ್ನಾಃ ಅವರಿಗೆ ಮರಣೋತ್ತರ ಪದ್ಮ ಭೂಷಣ ಪ್ರಶಸ್ತಿ ನೀಡಲಾಯಿತು. ಖನ್ನಾಃ ಅವರ ಪತ್ನಿ ಡಿಂಪಲ್ ಕಪಾಡಿಯಾ ಪ್ರಶಸ್ತಿಯನ್ನು ಸ್ವೀಕರಿಸಿದರು.

ಲಂಡನ್ ಒಲಿಂಪಿಕ್ ಕ್ರೀಡೆಯಲ್ಲಿ ಕಂಚು ಪದಕ ವಿಜೇತೆ ಬಾಕ್ಸರ್ ಎಂ.ಸಿ. ಮೇರಿ ಕೋಮ್ ಹಾಗೂ ಪ್ರೊ. ಜೋಗೇಶ್ ಚಂದ್ರ ಪಾಟಿ ಅವರು ಪದ್ಮಭೂಷಣ ಪ್ರಶಸ್ತಿಗೆ ಭಜನಾರಾಗ್ದ್ದಿದು, ಆದರೆ ಸಮಾರಂಭದಲ್ಲಿ ಅವರು ಗೈರು ಹಾಜರಾಗಿದ್ದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು:
ನಟ, ನಾನಾ ಪಾಟೇಕರ್, ಚಿತ್ರ ನಿರ್ಮಾಪಕ ರಮೇಶ್ ಸಿಪ್ಪಿ, ಕ್ರೀಡಾಪಟುಗಳಾದ ಯೋಗೇಶ್ವರ್ ದತ್ ಹಾಗೂ ವಿಜಯ್ ಕುಮಾರ್ ಮತ್ತು ರೀತು ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.