ADVERTISEMENT

ಪರಮಕುಡಿ ಪ್ರಕರಣ: ತನಿಖೆಗೆ ಆಯೋಗ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:30 IST
Last Updated 12 ಸೆಪ್ಟೆಂಬರ್ 2011, 19:30 IST

ಚೆನ್ನೈ(ಪಿಟಿಐ): ರಾಮನಾಥಪುರಂ ಪರಮಕುಡಿಯಲ್ಲಿ  ನಡೆದ ಗುಂಡಿನ ದಾಳಿ  ದುರದೃಷ್ಟಕರ ಎಂದ ತಮಿಳುನಾಡು ಮುಖ್ಯಮಂತ್ರಿ  ಜೆ.ಜಯಲಲಿತಾ ಅವರು  ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ನೇಮಿಸುವುದಾಗಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ನಂತರ ವಿರೋಧ ಪಕ್ಷಗಳು ನಿವೃತ್ತ ನ್ಯಾಯಮೂರ್ತಿಯೊಬ್ಬರಿಂದ ವಿಚಾರಣೆಯನ್ನು ಮಾಡಿಸುವಂತೆ ಸಲಹೆ ನೀಡಿದಾಗ ಜಯಲಲಿತಾ ಅವರು ಅದಕ್ಕೆ ಒಪ್ಪಿಕೊಂಡರು.

ಭಾನುವಾರ ದಲಿತ ಮುಖಂಡ ಜಾನ್ ಪಾಂಡ್ಯನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಹಬ್ಬಿದಾಗ ಹಿಂಸಾಚಾರದಲ್ಲಿ ತೊಡಗಿದ್ದವರನ್ನು ನಿಯಂತ್ರಿಸಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದರಿಂದ ಐದು ಮಂದಿ ಸತ್ತು ಹಲವರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.