ADVERTISEMENT

ಪಶ್ಚಿಮಘಟ್ಟದಲ್ಲಿ ಮತ್ತೆ ನಕ್ಸಲ್ ಸದ್ದು

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 19:30 IST
Last Updated 20 ಜೂನ್ 2012, 19:30 IST

ನವದೆಹಲಿ: ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟದಲ್ಲಿ ನಕ್ಸಲೀಯರು ಮರುಸಂಘಟಿತರಾಗಲು ಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ ಹಾಗೂ ಕೊಡಗು ಸೇರಿ ಏಳು ಜಿಲ್ಲೆಗಳಲ್ಲಿ ಸುಮಾರು 100 ಕಿ.ಮಿ. ವ್ಯಾಪ್ತಿಯಲ್ಲಿ ನಕ್ಸಲರು ತಮ್ಮ ಚಟುವಟಿಕೆ ಹೆಚ್ಚಿಸಲು ಪ್ರಯತ್ನಿಸುತ್ತ್ದ್ದಿದಾರೆ.

ಇಲ್ಲಿ ನೆಲೆ ಸ್ಥಾಪಿಸಲು ಕೇಂದ್ರ ಸಮಿತಿ ಸದಸ್ಯ, ಬೆಂಗಳೂರು ಮೂಲದ ಕುಪ್ಪು ಸ್ವಾಮಿಯನ್ನು ನಿಯೋಜಿಸಿದ್ದಾರೆ ಎಂದು ಗುಪ್ತಚರ ವರದಿಯಲ್ಲಿ ಹೇಳಲಾಗಿದೆ.

ತಮಿಳುನಾಡು, ಕೇರಳ ರಾಜ್ಯಗಳ ನಕ್ಸಲ್ ಪಡೆಗಳು ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಿಕ್ರಂ ಗೌಡ, ಲತಾ, ಮಹೇಶ್ ಹಾಗೂ ಸುಂದರಿ ನೇತೃತ್ವದ ಸ್ಥಳೀಯ ಸಂಘಟನೆಗಳ ಜತೆ ಸೇರಿಕೊಂಡು ಚಟುವಟಿಕೆ ನಡೆಸುತ್ತಿವೆ ಎಂದೂ ಎಚ್ಚರಿಸಲಾಗಿದೆ.

ಕುಪ್ಪು ದೇವರಾಜ್, ರಮೇಶ್, ರಾಯಣ್ಣ, ಬಾಲಾಜಿ, ಜೋಗೇಶ್ ಹಾಗೂ ಯೋಗೇಶ್ ಹೆಸರಿನಲ್ಲಿ ವೇಷ ಮರೆಸಿಕೊಂಡಿರುವ ಕುಪ್ಪು ಸ್ವಾಮಿ ತಲೆಗೆ ಜಾರ್ಖಂಡ್ ಹಾಗು ಛತ್ತೀಸ್‌ಗಡ ರಾಜ್ಯಗಳು ಕ್ರಮವಾಗಿ ರೂ 7 ಹಾಗೂ 10 ಲಕ್ಷ ಬಹುಮಾನ ಘೋಷಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.