ADVERTISEMENT

ಪಿಎನ್‌ಬಿ ಬ್ಯಾಂಕ್‌ ಹಗರಣ: ನೀರವ್ ಮೋದಿ ಆಪ್ತ ಸಹಾಯಕನ ಬಂಧನ

ಪಿಟಿಐ
Published 9 ಏಪ್ರಿಲ್ 2019, 10:20 IST
Last Updated 9 ಏಪ್ರಿಲ್ 2019, 10:20 IST
ಪಿಎನ್‌ಬಿ  ಬ್ಯಾಂಕ್‌ ಹಗರಣ: ನೀರವ್ ಮೋದಿ ಆಪ್ತ ಸಹಾಯಕನ ಬಂಧನ
ಪಿಎನ್‌ಬಿ ಬ್ಯಾಂಕ್‌ ಹಗರಣ: ನೀರವ್ ಮೋದಿ ಆಪ್ತ ಸಹಾಯಕನ ಬಂಧನ   

ಮುಂಬೈ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಬಹುಕೋಟಿ ಹಗರಣದಲ್ಲಿ ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಅವರ ಆಪ್ತ ಸಹಾಯಕ ಶ್ಯಾಮ್ ಸುಂದರ್ ವಾಧ್ವಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ)ಮಂಗಳವಾರ ತಡರಾತ್ರಿ ಬಂಧಿಸಿದೆ.

ಫೈರ್ ಸ್ಟಾರ್ ಸಮೂಹದ ಉಪಾಧ್ಯಕ್ಷರಾದ ಶ್ಯಾಮ್ ಸುಂದರ್ ವಾದ್ವಾ ಅವರನ್ನು ಮಂಗಳವಾರ ತಡರಾತ್ರಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಬಂಧಿಸಿದ ಮೊದ‌ಲ ಆರೋಪಿ.

ADVERTISEMENT

ಶ್ಯಾಮ್ ಅವರು ನೀರವ್ ಮೋದಿ ಅವರಿಗೆ ತುಂಬಾ ಆಪ್ತರು. ಇವರು ಸಹ ಪಿಎನ್‌ಬಿ ಬಹುಕೋಟಿ ಹಗರಣದಲ್ಲಿ ನೀರವ್ ಮೋದಿ ಅವರಿಗೆ ಸಾಥ್ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶ್ಯಾಮ್ ಸುಂದರ್ ವಾದ್ವಾ ಅವರ ಬಂಧನ ಹಗರಣದ ಜಾಲವನ್ನು ಭೇದಿಸುವಲ್ಲಿ ಸಹಾಯಕವಾಗಲಿದೆ ಎಂದು ತನಿಖಾ ಇಲಾಖೆ ಹೇಳಿದೆ.

ಈ ಪ್ರಕರಣ ಸಂಬಂಧ ತನಿಖಾ ಇಲಾಖೆಯು ನೀರವ್ ಮೋದಿ ಹಾಗೂ ಅವರ ಸಂಬಂಧಿ ಮತ್ತು ಪಾಲುದಾರ ಮೆಹುಲ್‌ ಚೋಕ್ಸಿ ವಿರುದ್ಧ ಎಫ್ಐಆರ್ ದಾಖಲಿಸಿದೆ.

ಫೆ.16ರಂದು ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿದ ಜಾರಿ ನಿರ್ದೇಶನಾಲಯದ ಆಧಿಕಾರಿಗಳು ₹5,100 ಕೋಟಿ ಮೌಲ್ಯದ ವಜ್ರ, ಚಿನ್ನ ಮತ್ತು ಆಭರಣಗಳನ್ನು ವಶಪಡಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.