ADVERTISEMENT

ಪಿಸ್ತೂಲುಗಳಿಗೆ ಮುಗಿಬಿದ್ದ ಸಂಸದರು!

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ನವದೆಹಲಿ, (ಪಿಟಿಐ): ಸರ್ಕಾರ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಅಥವಾ ಮುಟ್ಟುಗೋಲು ಹಾಕಿಕೊಂಡಿದ್ದ ಪಿಸ್ತೂಲುಗಳನ್ನು ಖರೀದಿಸಲು ಸಂಸದರು ಮುಗಿಬಿದ್ದ ಸಂಗತಿ ಬೆಳಕಿಗೆ ಬಂದಿದೆ.

ಒಟ್ಟು 750 ಸಂಸದರು, ಸರ್ಕಾರ ಕಳೆದ 25 ವರ್ಷಗಳಲ್ಲಿ ವಶಪಡಿಸಿಕೊಂಡಿದ್ದ ಆಯುಧಗಳನ್ನು ಖರೀದಿಸಿದ್ದಾರೆ. ಇವರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ, ಕಾಂಗ್ರೆಸ್ ಸಂಸದ ಜನಾರ್ದನ ದ್ವಿವೇದಿ, ಬಿಜೆಪಿ ಸಂಸದ ಶಹನವಾಜ್ ಹುಸೇನ್, ಅಬು ಅಜಂ ಅಜ್ಮಿ, ಅತೀಕ್ ಅಹಮದ್ ಹಾಗೂ ಕಾರಾಗೃಹದಲ್ಲಿರುವ ಮಹಮ್ಮದ್ ಶಹಾಬುದ್ದೀನ್ ಪ್ರಮುಖರು.

ಮಾಹಿತಿ ಹಕ್ಕು ಕಾಯ್ದೆ ಅಡಿ ಗೋಪಾಲ್ ಪ್ರಸಾದ್ ಎಂಬುವವರು ಪಡೆದಿರುವ ಮಾಹಿತಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಹಣಕಾಸು ಇಲಾಖೆಯ ಸುತ್ತೋಲೆ ಪ್ರಕಾರ ಸರ್ಕಾರ ವಶಪಡಿಸಿಕೊಂಡ ಆಯುಧಗಳನ್ನು ಹಾಲಿ ಸಂಸದರಿಗೆ ಕೇವಲ 10 ವರ್ಷಗಳ ಅವಧಿಗಾಗಿ ಮಾರಾಟ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.