ಭುವನೇಶ್ವರ (ಐಎಎನ್ಎಸ್): ಅಣ್ವಸ್ತ್ರ ಸಿಡಿತಲೆ ಸಾಗಿಸುವ ಪೃಥ್ವಿ –2 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಮಂಗಳವಾರ ಯಶಸ್ವಿಯಾಗಿದೆ.
ಸಮರಾಭ್ಯಾಸದ ಅಂಗವಾಗಿ ಸೇನೆ ಚಾಂದಿಪುರ ಸೇನಾ ನೆಲೆಯಲ್ಲಿ ಈ ಪ್ರಯೋಗಾರ್ಥ ಉಡಾವಣೆ ನಡೆಸಿದೆ.
ಅಣ್ವಸ್ತ್ರ ಸಿಡಿತಲೆ ಹೊತ್ತು 350 ಕಿ.ಮೀ ದೂರ ನೆಲದಿಂದ ನೆಲಕ್ಕೆ ಚಿಮ್ಮುವ ಕ್ಷಿಪಣಿಯನ್ನು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.