ADVERTISEMENT

ಪೆಟ್ರೋಲ್ ನಂತರ ಡಿಸೇಲ್, ಅಡುಗೆ ಅನಿಲ ಏರಿಕೆಗೆ ಸಿದ್ದತೆ ?

​ಪ್ರಜಾವಾಣಿ ವಾರ್ತೆ
Published 24 ಮೇ 2012, 9:20 IST
Last Updated 24 ಮೇ 2012, 9:20 IST

ನವದೆಹಲಿ (ಐಎಎನ್‌ಎಸ್): ಪೆಟ್ರೋಲ್ ಬೆಲೆ ಏರಿಕೆಯ ಬೆನ್ನಲ್ಲೆ ಗ್ರಾಹಕರಿಗೆ ಮತ್ತೂ ಹಲವು ಏರಿಕೆ ಬರೆಗಳು ಬೀಳುವ ಸಾಧ್ಯತೆಗೆಳು ನಿಚ್ಚಳವಾಗುತ್ತಿದ್ದು, ಶುಕ್ರವಾರ ಡಿಸೇಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಕುರಿತು ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದ ಸಚಿವರ ಉನ್ನತ ಮಟ್ಟದ ಸಮಿತಿ ಸಭೆ ಸೇರಿ ಚರ್ಚೆ ನಡೆಸಲಿದೆ.

ಹಣಕಾಸು ಸಚಿವಾಲಯದ ಹೆಸರನ್ನು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಈ ವಿಷಯವನ್ನು ಸುದ್ದಿಸಂಸ್ಥೆಗೆ ತಿಳಿಸಿದ್ದು, ಶುಕ್ರವಾರ ಮಧ್ಯಾಹ್ನ ಉನ್ನತ ಮಟ್ಟದ ಸಚಿವರ ಸಮಿತಿಯು ಸಭೆ ಸೇರಿ ಡಿಸೇಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆಯನ್ನು ಕುರಿತಂತೆ ಚರ್ಚೆ ನಡೆಸಲಿದೆ ಎಂದು ಹೇಳಿದ್ದಾರೆ.

ಇತ್ತ ತೈಲ ಕಂಪೆನಿಗಳೂ ಕೂಡ ಡಿಸೇಲ್, ಸೀಮೆಎಣ್ಣೆ ಹಾಗೂ ಅಡುಗೆ ಅನಿಲ ಮಾರಾಟದಿಂದ ಪ್ರತಿನಿತ್ಯ 500 ಕೋಟಿ ರೂ ನಷ್ಟು ನಷ್ಟ ಅನುಭವಿಸುತ್ತಿರುವುದಾಗಿ ತಿಳಿಸಿವೆ. ಸದ್ಯ ಸರ್ಕಾರವು ಪ್ರತಿ ಲೀಟರ್ ಡಿಸೇಲ್‌ಗೆ ರೂ 13.64, ಸೀಮೆಎಣ್ಣೆಗೆ ರೂ  31 ಹಾಗೂ ಪ್ರತಿ ಅಡುಗೆ ಅನಿಲ ಸಿಲಿಂಡರ್‌ಗೆ ರೂ 479 ನ್ನು ಸಬ್ಸಿಡಿಯಾಗಿ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.