ನವದೆಹಲಿ (ಪಿಟಿಐ): ಬಾಲಿವುಡ್ ಬಾದಶಾ ಶಾರುಖ್ ಖಾನ್ ತನ್ನ ಮಕ್ಕ ಳಾದ ಆರ್ಯನ್, ಸುಹಾನಾ ಮತ್ತು ಅಬ್ರಾಂ ಅವರನ್ನು ತಮ್ಮ ಕುಟುಂಬದ ಮೂಲ ಸ್ಥಾನವಾದ ಪಾಕಿಸ್ತಾನದ ಪೆಶಾವರಕ್ಕೆ ಕರೆದೊಯ್ಯಲು ಬಯಸಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖರ್ ತಮ್ಮ ದೇಶಕ್ಕೆ ಭೇಟಿ ನೀಡುವಂತೆ ನೀಡಿದ ಆಹ್ವಾನವನ್ನು ನಿರಾಕರಿಸಿದ ಅವರು ಚಿಕ್ಕವನಿದ್ದಾಗ ತಂದೆಯೊಡನೆ ಹೋಗಿದ್ದ ಆ ಸ್ಥಳಕ್ಕೆ ಮತ್ತೆ ಹೋಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
‘ನನ್ನ ಕುಟುಂಬದ ಮೂಲ ಪೆಶಾವರ. ಕೆಲವು ಸದಸ್ಯರು ಇನ್ನೂ ಅಲ್ಲಿ ವಾಸವಾಗಿದ್ದಾರೆ. ನಾನು 15ವರ್ಷದವನಾಗಿದ್ದಾಗ ನನ್ನ ತಂದೆ ನನ್ನನ್ನು ಅಲ್ಲಿಗೆ ಕರೆದೊಯ್ದಿದ್ದರು.
ಪೆಶಾವರ, ಕರಾಚಿ ಮತ್ತು ಲಾಹೋರ್ದಲ್ಲಿ ತಂದೆಯೊಂದಿಗೆ ಕಳೆದ ದಿನಗಳ ಕುರಿತು ನನಗಿನ್ನೂ ಕೆಲವು ಅದ್ಭುತವಾದ ನೆನಪುಗಳಿವೆ. ಆ ಸ್ಥಳಗಳನ್ನು ನನ್ನ ಮಕ್ಕಳಿಗೂ ತೋರಿಸಬೇಕು ಎಂಬ ಆಸೆ ನನಗಿದೆ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.