ADVERTISEMENT

ಪೊಲಿಯೋ ಬದಲಿಗೆ ಬೇರೆ ಲಸಿಕೆ: ನಾಲ್ವರು ಅಮಾನತು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಕೋಲ್ಕತ್ತ (ಐಎಎನ್‌ಎಸ್‌): ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಗ್ರಾಮ ವೊಂದರಲ್ಲಿ ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ಬದಲಿಗೆ ‘ಹೆಪಟೈಟಿಸ್‌ ಬಿ’ ರೋಗಕ್ಕೆ ನೀಡುವ ಔಷಧಿಯನ್ನು ಬಾಯಲ್ಲಿ ಹಾಕಿ ನಿರ್ಲಕ್ಷ್ಯತೆ ತೋರಿದ ಆರೋಪದ ಹಿನ್ನೆಲೆಯಲ್ಲಿ ನಾಲ್ವರು ಆರೋಗ್ಯ ಕಾರ್ಯಕರ್ತರನ್ನು ಸೋಮ ವಾರ ಅಮಾ­ನತು ಮಾಡಲಾಗಿದೆ.

ಅರಮ್‌ಬಾಘ್‌ ಉಪವಿಭಾಗದ ಖತುಲ್‌ ಗ್ರಾಮದ 114 ಮಕ್ಕಳಿಗೆ ಭಾನುವಾರದಂದು ಪಲ್ಸ್ ಪೊಲಿಯೊ ಬದಲಿಗೆ ತಪ್ಪಾಗಿ ‘ಹೆಪಟೈಟಸ್‌ ಬಿ’  ಲಸಿಕೆಯನ್ನು ಬಾಯಲ್ಲಿ ಹಾಕಲಾ ಗಿತ್ತು. ಇದರಿಂದ 60ಕ್ಕೂ ಹೆಚ್ಚು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸ ಲಾಯಿತು. ಅವರಲ್ಲಿ 20 ಮಕ್ಕಳು ಮನೆಗೆ ಮರಳಿದ್ದಾರೆ.

‘ನಾಲ್ವರು ಆರೋಗ್ಯ ಕಾರ್ಯ ಕರ್ತರು ತಮ್ಮ ಕೆಲಸದಲ್ಲಿ ನಿರ್ಲಕ್ಷ್ಯತೆ  ತೋರಿದ್ದಕ್ಕಾಗಿ ಅವರನ್ನು ಅಮಾನತು ಗೊಳಿಸಲಾಗಿದೆ. ಬದಲಾದ ಲಸಿಕೆ ಯಿಂದಾಗಿ ಮಕ್ಕಳ ಜೀವಕ್ಕೆ ಯಾವುದೇ ಹಾನಿಯುಂಟಾ­ಗುವುದಿಲ್ಲ’  ಎಂದು ಆರೋಗ್ಯ ಸೇವೆಗಳ ನಿರ್ದೇಶಕ ಬಿ.ಆರ್‌. ಸತ್ಪತಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಆರೋಗ್ಯ ಸಚಿವ ಚಂದ್ರಿಮಾ ಭಟ್ಟಾಚಾರ್ಯ ಘಟನೆ ಕುರಿತು ತನಿಖೆ ನಡೆಸುವಂತೆ ಸಂಬಂಧಿಸಿದ ಇಲಾಖೆಗೆ  ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.