ADVERTISEMENT

ಪೊಲೀಸರಿಗೆ ಹೈಕೋರ್ಟ್ ತರಾಟೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 18:30 IST
Last Updated 9 ಫೆಬ್ರುವರಿ 2011, 18:30 IST

ನವದೆಹಲಿ (ಪಿಟಿಐ): ಭಯೋತ್ಪಾದಕರೆಂಬ ಆರೋಪ ಹೊರಿಸಿ ಏಳು ಮಂದಿಯನ್ನು ಬಂಧಿಸಿದ್ದ ದೆಹಲಿ ಪೊಲೀಸರನ್ನು ಅಲ್ಲಿನ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತಲ್ಲದೆ, ಬಂಧಿತರ ಬಿಡುಗಡೆಗೆ ಆದೇಶಿಸಿದೆ. ಅಲ್ಲದೆ ಎನ್‌ಕೌಂಟರ್ ಒಂದರ ಕಥೆಯನ್ನು ಜಾಗರೂಕತೆಯಿಂದ ಠಾಣೆಯಲ್ಲಿಯೇ ಹೆಣೆದು ಪ್ರದರ್ಶಿಸಿದ್ದಾರೆ ಎಂದು ಕಿಡಿಕಾರಿದೆ.

2005ರ ಜುಲೈನಲ್ಲಿ ನಕಲಿ ಎನ್‌ಕೌಂಟರ್ ಒಂದರಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದ ಸಕೀಬ್ ರೆಹಮಾನ್, ಬಷೀರ್ ಅಹ್ಮದ್ ಷಾ, ನಜೀರ್ ಅಹ್ಮದ್ ಸೋಫಿ, ಹಾಜಿ ಗುಲಾಮ್ ಮೊಯಿನುದ್ದಿನ್ ದರ್, ಅಬ್ದುಲ್ ಮಜಿದ್ ಭಟ್, ಅಬ್ದುಲ್ ಖಾಯೂಮ್ ಖಾನ್ ಮತ್ತು ಬೀರೇಂದ್ರ ಕುಮಾರ್ ಸಿಂಗ್ ಅವರನ್ನು ನಿರಪರಾಧಿಗಳೆಂದು ಘೋಷಿಸಿದ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ವೀರೇಂದ್ರ ಭಟ್ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದರು.

2005ರ ಜುಲೈ 1ರ ಮಧ್ಯರಾತ್ರಿ ಎನ್‌ಕೌಂಟರ್ ನಡೆದಿದೆ ಎನ್ನಲಾಗಿದೆ. ಆದರೆ ವಾಸ್ತವವಾಗಿ ಯಾವುದೇ ಎನ್‌ಕೌಂಟರ್ ನಡೆದಿಲ್ಲ. ಆದರೆ ಘಟನೆ ನಡೆದಿರುವಂತೆ ಕಟ್ಟು ಕಥೆ ಹೆಣೆಯಲಾಗಿದೆ ಎಂದು ಕಿಡಿಕಾರಿದರು. ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ನಾಲ್ವರು ಪೊಲೀಸ್ ಅಧಿಕಾರಿಗಳ ಸೂಕ್ತ ವಿಚಾರಣೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಸಹ ಕೋರ್ಟ್ ಪೊಲೀಸ್ ಕಮೀಷನರ್ ಅವರಿಗೆ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.