ADVERTISEMENT

ಪೊಲೀಸ್ ಕೈಯಲ್ಲಿ ಎಕೆ47 ! ಲಷ್ಕರ್–ಇ–ತಯಬಾ ಉಗ್ರ ಸಂಘಟನೆ ಸೇರಿರುವ ಶಂಕೆ?

ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ವೈರಲ್

ಏಜೆನ್ಸೀಸ್
Published 28 ಅಕ್ಟೋಬರ್ 2017, 7:33 IST
Last Updated 28 ಅಕ್ಟೋಬರ್ 2017, 7:33 IST
ಪೊಲೀಸ್ ಕೈಯಲ್ಲಿ ಎಕೆ47 ! ಲಷ್ಕರ್–ಇ–ತಯಬಾ  ಉಗ್ರ ಸಂಘಟನೆ ಸೇರಿರುವ ಶಂಕೆ?
ಪೊಲೀಸ್ ಕೈಯಲ್ಲಿ ಎಕೆ47 ! ಲಷ್ಕರ್–ಇ–ತಯಬಾ ಉಗ್ರ ಸಂಘಟನೆ ಸೇರಿರುವ ಶಂಕೆ?   

ಜಮ್ಮು: ಜಮ್ಮು ಕಾಶ್ಮೀರದ ಪೊಲೀಸನೊಬ್ಬ ಕೈಯಲ್ಲಿ ಎಕೆ 47 ಹಿಡಿದು ನಡೆದು ಹೋಗುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಲಷ್ಕರ್–ಇ–ತಯಬಾ ಉಗ್ರ ಸಂಘಟನೆ ಸೇರಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಫೋಟೊದಲ್ಲಿರುವ ವ್ಯಕ್ತಿಯನ್ನು ಶೋಫಿಯಾ ಜಿಲ್ಲೆಯ ಹೆಫ್ ಶಿರ್ಮಾಲ್ ಗ್ರಾಮದ ನಿವಾಸಿ ಇಶ್ತಾಕ್ ಅಹ್ಮದ್ ಎಂಬುದು ಮೇಲು ನೋಟಕ್ಕೆ ತಿಳಿದು ಬಂದಿದೆ. ಈತ 2012ರಲ್ಲಿ ಜಮ್ಮು ಕಾಶ್ಮೀರ ಪೊಲೀಸ್ ಪಡೆಗೆ ಸೇರಿದ್ದನು.

ಇಶ್ತಾಕ್ ಅವರನ್ನು ಕತುವಾ ಜಿಲ್ಲೆಯ ಪೊಲೀಸ್ ತರಬೇತಿ ಕೇಂದ್ರಕ್ಕೆ ನಿಯುಕ್ತಿಗೊಳಿಸಲಾಗಿತ್ತು.  ಮನೆಗೆ ಹೋಗುವುದಾಗಿ ಕೆಲವು ದಿನಗಳ ಕಾಲ ರಜೆ ತೆಗೆದುಕೊಂಡಿದ್ದ.  ಅಕ್ಟೋಬರ್ 23ಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಇನ್ನು ವಾಪಸ್ ಬಂದಿಲ್ಲ. ಇಶ್ತಾಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ ಎಂದು  ಕತುವಾ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ADVERTISEMENT

ಅಲ್ಲದೇ ಲಷ್ಕರ್–ಇ–ತಯಬಾ ಉಗ್ರ ಸಂಘಟನೆ ಸೇರಿರುವ ಬಗ್ಗೆ ಇನ್ನು ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಇನ್ನು ಇದರ ಬಗ್ಗೆ ವಿಚಾರಣೆಯಾಗಬೇಕಿದೆ. ಇಶ್ತಾಕ್ ಕುಟುಂಬಸ್ಥರು ಇಶ್ತಾಕ್ ಕಾಣೆಯಾಗಿರುವುದರ ಬಗ್ಗೆ ಪೊಲೀಸರ ಬಳಿ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.