ADVERTISEMENT

ಪ್ಯಾಂಕ್ರಿಯಾಟೈಸಿಸ್‌ ಸಮಸ್ಯೆಗೆ ಅಮೆರಿಕದಲ್ಲಿ ಚಿಕಿತ್ಸೆ: ಏಪ್ರಿಲ್‌ನಲ್ಲಿ ಮರಳಲಿರುವ ಪರ‍್ರೀಕರ್‌

ಏಜೆನ್ಸೀಸ್
Published 18 ಮಾರ್ಚ್ 2018, 10:19 IST
Last Updated 18 ಮಾರ್ಚ್ 2018, 10:19 IST
ಪ್ಯಾಂಕ್ರಿಯಾಟೈಸಿಸ್‌ ಸಮಸ್ಯೆಗೆ ಅಮೆರಿಕದಲ್ಲಿ ಚಿಕಿತ್ಸೆ: ಏಪ್ರಿಲ್‌ನಲ್ಲಿ  ಮರಳಲಿರುವ ಪರ‍್ರೀಕರ್‌
ಪ್ಯಾಂಕ್ರಿಯಾಟೈಸಿಸ್‌ ಸಮಸ್ಯೆಗೆ ಅಮೆರಿಕದಲ್ಲಿ ಚಿಕಿತ್ಸೆ: ಏಪ್ರಿಲ್‌ನಲ್ಲಿ ಮರಳಲಿರುವ ಪರ‍್ರೀಕರ್‌   

ಪಣಜಿ: ಅನಾರೋಗ್ಯದಿಂದ ಬಳಲುತ್ತಿರುವ ಮುಖ್ಯಮಂತ್ರಿ ಮನೋಹರ್‌ ಪರ‍್ರೀಕರ್‌ ಅಮೆರಿಕದಲ್ಲಿ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಏಪ್ರಿಲ್‌ 2ನೇ ವಾರದಲ್ಲಿ ದೇಶಕ್ಕೆ ವಾಪಸ್‌ ಆಗಲಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಸದ್ಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ಇನ್ನೂ 15 ದಿನ ಚಿಕಿತ್ಸೆ ಮುಂದುವರಿಯಲಿದೆ. ಹಾಗಾಗಿ ಏಪ್ರಿಲ್‌ 2ನೇ ವಾರದಲ್ಲಿ ದೇಶಕ್ಕೆ ಮರಳಲಿದ್ದಾರೆ. ಅಲ್ಲಿಂದ ಬಂದ ಬಳಿಕ ಮತ್ತೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಪ್ಯಾಂಕ್ರಿಯಾಟೈಸಿಸ್‌ (ಮೇದೋಜೀರಕ ಗ್ರಂಥಿ) ತೊಂದರೆಯಿಂದ ಬಳಲುತ್ತಿರುವ ಪರ‍್ರೀಕರ್‌ ಆರಂಭದ ಕೆಲವು ದಿನಗಳು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ನಡುವೆ ಆಸ್ಪತ್ರೆಯಿಂದ ಬಿಡುಗಡೆ ಪಡೆದು ಫೆಬ್ರುವರಿ 21ರಂದು ರಾಜ್ಯ ಬಜೆಟ್‌ ಮಂಡಿಸಿದ್ದರು.

ADVERTISEMENT

ಕೆಲದಿನಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆದಿದ್ದ ಅವರು ಗೋವಾ ಮೆಡಿಕಲ್‌ ಆಸ್ಪತ್ರೆಯಲ್ಲಿಯೂ ಕೆಲಕಾಲ ಚಿಕಿತ್ಸೆ ಪಡೆದಿದ್ದರು. ಮಾರ್ಚ್‌ 5ರಂದು ಮತ್ತೆ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ಕರೆದೊಯ್ಯಲಾಗಿತ್ತು.

ಗೋವಾದಿಂದ ತೆರಳುವ ಮುನ್ನ ತಮ್ಮ ನಿವಾಸದಲ್ಲಿ ಹಿರಿಯ ಸಚಿವರೊಂದಿಗೆ ಸಭೆ ನಡೆಸಿದ್ದ ಪರ‍್ರೀಕರ್‌, ತಮ್ಮ ಅನುಪಸ್ಥಿತಿಯಲ್ಲಿ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲು ಸಹಕಾರಿಯಾಗಲೆಂದು ಸಂಪುಟ ಸಲಹಾ ಸಮಿತಿ ರಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.