ADVERTISEMENT

‘ಪ್ಯಾಲೆಸ್ಟಿನ್‌ ಕುರಿತ ಭಾರತದ ನಿಲುವುಗಳನ್ನು ಮೂರನೇ ರಾಷ್ಟ್ರವೊಂದು ಬದಲಿಸಲಾಗದು’

ಟ್ರಂಪ್‌ ಘೋಷಣೆಗೆ ಭಾರತದ ಪ್ರತಿಕ್ರಿಯೆ

ಏಜೆನ್ಸೀಸ್
Published 7 ಡಿಸೆಂಬರ್ 2017, 6:52 IST
Last Updated 7 ಡಿಸೆಂಬರ್ 2017, 6:52 IST
‘ಪ್ಯಾಲೆಸ್ಟಿನ್‌ ಕುರಿತ ಭಾರತದ ನಿಲುವುಗಳನ್ನು ಮೂರನೇ ರಾಷ್ಟ್ರವೊಂದು ಬದಲಿಸಲಾಗದು’
‘ಪ್ಯಾಲೆಸ್ಟಿನ್‌ ಕುರಿತ ಭಾರತದ ನಿಲುವುಗಳನ್ನು ಮೂರನೇ ರಾಷ್ಟ್ರವೊಂದು ಬದಲಿಸಲಾಗದು’   

ನವದೆಹಲಿ: ಜೆರುಸಲೆಂ ಇಸ್ರೇಲ್‌ ರಾಜಧಾನಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಭಾರತ, ಪ್ಯಾಲೆಸ್ಟಿನ್‌ ಕುರಿತ ಭಾರತದ ನಿಲುವುಗಳನ್ನು ಮೂರನೇ ರಾಷ್ಟ್ರವೊಂದು ಬದಲಿಸಲಾಗದು ಎಂದು ಹೇಳಿದೆ.

‘ಪ್ಯಾಲೆಸ್ಟಿನ್‌ ಕುರಿತ ಭಾರತದ ನಿಲುವು ಸ್ವತಂತ್ರವಾದುದು ಮತ್ತು ದೃಢವಾದುದು. ಈ ನಿಲುವು ನಮ್ಮ ದೃಷ್ಟಿಕೋನ ಹಾಗೂ ಹಿತಾಸಕ್ತಿಗಳ ಆಧಾರದಲ್ಲಿ ರೂಪುಗೊಂಡಿದೆ. ಇದನ್ನು ಮೂರನೇ ರಾಷ್ಟ್ರವೊಂದು ಬದಲಿಸಲು ಸಾಧ್ಯವಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT