ADVERTISEMENT

ಪ್ರತಿಭಾ ರೇಗೆ ಜ್ಞಾನಪೀಠ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ನವದೆಹಲಿ (ಪಿಟಿಐ): ಒರಿಯಾ ಭಾಷೆಯ  ಖ್ಯಾತ ಕಾದಂಬರಿಕಾರ್ತಿ ಹಾಗೂ ವಿದ್ವಾಂಸರಾದ ಪ್ರತಿಭಾ ರೇ ಅವರಿಗೆ 2011ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಘೋಷಿಸಲಾಗಿದೆ.

ಈ ಸಂಬಂಧ ಲೇಖಕ ಸೀತಾಕಾಂತ ಮಹಾಪಾತ್ರ ನೇತೃತ್ವದಲ್ಲಿ ಗುರುವಾರ ನಡೆದ ಸಮಿತಿ ಸಭೆಯಲ್ಲಿ 69 ವರ್ಷದ ರೇ ಅವರ ಹೆಸರನ್ನು ಪ್ರಶಸ್ತಿಗೆ ಸೂಚಿಸಲಾಯಿತು. ಸುಮಾರು 40ಕ್ಕೂ ಹೆಚ್ಚು ಕಾದಂಬರಿ, ಪ್ರವಾಸಕಥನ, ಸಣ್ಣ ಕತೆಗಳನ್ನು ರಚಿಸಿರುವ ರೇ, ಒರಿಯಾ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಪ್ರಶಸ್ತಿ ರೂ 7 ಲಕ್ಷ ನಗದು, ಸ್ಮರಣಿಕೆ ಒಳಗೊಂಡಿದೆ. ಪ್ರತಿಭಾ ರೇ ಇಂತಹ ಗೌರವ ಸ್ವೀಕರಿಸುತ್ತಿರುವ 47ನೇ ಲೇಖಕರಾಗಿದ್ದಾರೆ.

1943ರಲ್ಲಿ ಜನಿಸಿದ ರೇ ವೃತ್ತಿಯಲ್ಲಿ ಪ್ರಾಧ್ಯಾಪಕಿಯಾಗಿದ್ದು ದೇಶದ ಪ್ರಮುಖ ಕಾದಂಬರಿಕಾರರಾಗಿದ್ದಾರೆ. ಅವರ ಕಾದಂಬರಿ ಹಾಗೂ ಸಣ್ಣ ಕತೆಗಳು ಗರಿಷ್ಠ ಓದುಗರನ್ನು ತಲುಪಿದ್ದು ವಿಶೇಷ ಎನಿಸಿವೆ. ಹಲವು ಕಾದಂಬರಿ, ಸಣ್ಣ ಕತೆಗಳು ಇಂಗ್ಲಿಷ್ ಹಾಗೂ ವಿದೇಶಿ ಭಾಷೆಗಳಿಗೆ ಭಾಷಾಂತರಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.