ADVERTISEMENT

ಫಡಣವೀಸ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಪಿಟಿಐ
Published 9 ಡಿಸೆಂಬರ್ 2017, 19:15 IST
Last Updated 9 ಡಿಸೆಂಬರ್ 2017, 19:15 IST
ದೇವೇಂದ್ರ ಫಡಣವೀಸ್‌
ದೇವೇಂದ್ರ ಫಡಣವೀಸ್‌   

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ನಾಸಿಕ್‌ನಿಂದ ಔರಂಗಾಬಾದ್‌ಗೆ ಶನಿವಾರ ಪ್ರಯಾಣಿಸುತ್ತಿದ್ದ ಖಾಸಗಿ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್‌ನ ಅತಿಯಾದ ತೂಕವೇ ಭೂಸ್ಪರ್ಶಕ್ಕೆ ಕಾರಣ.

ಹೆಲಿಕಾಪ್ಟರ್‌ನಿಂದ ಕೆಲವು ಪ್ರಯಾಣಿಕರು ಹಾಗೂ ಸಾಮಾನುಗಳನ್ನು ಇಳಿಸಿದ ಪರಿಣಾಮ, ಅದು ಮತ್ತೆ ನಿಗದಿತ ಸ್ಥಳಕ್ಕೆ ಯಶಸ್ವಿಯಾಗಿ ಹಾರಾಟ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ನಿರ್ದಿಷ್ಟ ಮಟ್ಟದ ಎತ್ತರ ತಲುಪಲು ಹೆಲಿಕಾಪ್ಟರ್‌ ವಿಫಲವಾದ ಕಾರಣ ಅದರಲ್ಲಿದ್ದ ಒಂದಿಷ್ಟು ಸಾಮಾನುಗಳನ್ನೂ ಕೆಳಗಿಳಿಸಲಾಯಿತು. ಫಡಣವೀಸ್‌  ಔರಂಗಾಬಾದ್‌ಗೆ ತೆರಳಿ, ಅಲ್ಲಿ ನಿಗದಿಯಾಗಿದ್ದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಫಡಣವೀಸ್‌ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿರುವುದು ಈ ವರ್ಷದಲ್ಲಿ ಇದು ನಾಲ್ಕನೇ ಬಾರಿ. ಈ ಹಿಂದೆ ಮೇ 10 ಹಾಗೂ ಮೇ 25 ಮತ್ತು ಜುಲೈ 7ರಂದು ಫಡಣವೀಸ್‌ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗಳು ಅನೇಕ ತಾಂತ್ರಿಕ ದೋಷ ಎದುರಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.