ADVERTISEMENT

ಬಜೆಟ್ ಮಂಡನೆ ಆರಂಭ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 5:40 IST
Last Updated 16 ಮಾರ್ಚ್ 2012, 5:40 IST

ನವದೆಹಲಿ (ಪಿಟಿಐ/ಐಎಎನ್‌ಎಸ್): ಪ್ರತಿಪಕ್ಷಗಳ ಸದಸ್ಯರ ಗದ್ದಲದ ಮಧ್ಯೆಯೆ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು 2012-13ನೇ ಸಾಲಿನ ಬಜೆಟ್‌ನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸುತ್ತಿದ್ದಾರೆ.

ಇದು ಅವರು ಮಂಡಿಸುತ್ತಿರುವ 7ನೇ ಬಜೆಟ್ ಆಗಿದೆ. ಜತೆಗೆ ಇದು ಸಂಸತ್ತಿನ ಇತಿಹಾಸದಲ್ಲಿ 81ನೇ  ಬಜೆಟ್ ಆಗಿ ದಾಖಲಾಗಲಿದೆ.

ಇದಕ್ಕೂ ಮುನ್ನ ಅವರು ಪ್ರಧಾನಮಂತ್ರಿ ಮನಮೋಹನಸಿಂಗ್ ಹಾಗೂ ಸಂಪುಟದ ಹಿರಿಯ ಸದಸ್ಯರೊಂದಿಗೆ ಸಭೆ ನಡೆಸಿದರು. ಸಂಪುಟವು ಬಜೆಟ್‌ನಲ್ಲಿನ ಹಲವಾರು ಯೋಜನೆಗಳಿಗೆ ಒಪ್ಪಿಗೆ ನೀಡಿತು.

ಸದನ ಆರಂಭವಾಗುತ್ತಿದಂತೆ ಬಜೆಟ್ ಮಂಡನೆಗೆ ಅಡ್ಡಿಪಡಿಸಿ ಗದ್ದಲ ಎಬ್ಬಿಸಿದ  ಪ್ರತಿಪಕ್ಷಗಳ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಸಭಾದ್ಯಕ್ಷೆ ಮೀರಾಕುಮಾರ್ ಅವರು ಹಣಕಾಸು ಸಚಿವರು ಸಂವಿಧಾನಾತ್ಮಕ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಸುಮ್ಮನಿರಿ ಎಂದರು.

ನಂತರ ಪ್ರಣವ್‌ಮುಖರ್ಜಿ ಬಜೆಟ್ ಓದಲು ಆರಂಭಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.