
ಪ್ರಜಾವಾಣಿ ವಾರ್ತೆನವದೆಹಲಿ, (ಪಿಟಿಐ): ಬಾಲಾಪರಾಧಿಗಳ ಯೋಗಕ್ಷೇಮ ವಿಚಾರಣೆಗೆ ಪ್ರತಿ ಪೊಲೀಸ್ ಠಾಣೆಯಲ್ಲೂ ಮಕ್ಕಳ ಕಲ್ಯಾಣ ಅಧಿಕಾರಿಗಳನ್ನು ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.
ಬಾಲಾಪರಾಧಿಗಳ ಕಾನೂನು ಅನುಷ್ಠಾನದ ಮೇಲುಸ್ತುವಾರಿ ಹೊತ್ತಿರುವ ನ್ಯಾಯಾಲಯ, ಮಕ್ಕಳ ಕಲ್ಯಾಣ ಅಧಿಕಾರಿಗಳೆಂದು ನಿಯೋಜಿಸಲಾಗುವ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ತರಬೇತಿಗಾಗಿ ಅಗತ್ಯ ಮಾರ್ಗಸೂಚಿ ನಿಗದಿಗೆ ರಾಜ್ಯ ಸರ್ಕಾರ ಮತ್ತು ವಿವಿಧ ಕಾನೂನು ಸೇವಾ ಪ್ರಾಧಿಕಾರಗಳಿಗೆ ಆದೇಶಿಸಿದೆ.
ಪ್ರತಿ ಠಾಣೆಯಲ್ಲಿ ನಿಯೋಜಿಸಲಾಗುವ ಮಕ್ಕಳ ಕಲ್ಯಾಣ ಅಧಿಕಾರಿಗಳು, ಬಾಲಾಪರಾಧಿಗಳನ್ನು ಪೊಲೀಸರು ನಡೆಸಿಕೊಳ್ಳುತ್ತಿರುವ ರೀತಿಯ ಮೇಲೆ ನಿಗಾ ಇರಿಸಬೇಕು. ಪೊಲೀಸರು ಮತ್ತು ಬಾಲಾಪರಾಧಿಗಳ ನಡುವಿನ ಸೇತುವೆಯಂತೆ ಕೆಲಸ ನಿರ್ವಹಿಸಬೇಕು ಎಂದು ಸಲಹೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.