ADVERTISEMENT

ಬಾಲಾರೋಪಿ ಗುರುತು ಪತ್ತೆ

ಸಾಮೂಹಿಕ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಮುಂಬೈ (ಪಿಟಿಐ):  ಶಕ್ತಿ ಮಿಲ್ ಆವರಣದಲ್ಲಿ ಪತ್ರಿಕಾ ಛಾಯಾಗ್ರಾಹಕಿಯ ಮೇಲೆ ಇತ್ತೀಚೆಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಾಲ ಆರೋಪಿಯ ಗುರುತು ಪತ್ತೆ ಮಾಡಲಾಗಿದೆ.

ದಕ್ಷಿಣ ಮುಂಬೈನ ಡೊಂಗ್ರಿಯ ಬಾಲ ಅಪರಾಧಿಗಳ ಮಂದಿರದಲ್ಲಿ ಬುಧವಾರ ನಡೆದ ಆರೋಪಿಗಳ ಗುರುತು ಪತ್ತೆ ಪರೇಡ್‌ನಲ್ಲಿ ಛಾಯಾಗ್ರಾಹಕಿ ಮತ್ತು ಅವಳ ಸಹೋದ್ಯೋಗಿ ಬಾಲ ಆರೋಪಿಯನ್ನು ಗುರುತಿಸಿದರು. 

ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಅಪರಾಧಿಗಳ ಗುರುತು ಪತ್ತೆ ಪರೇಡ್‌ನಲ್ಲಿ ಹಲವಾರು ಬಾಲ ಆರೋಪಿಗಳನ್ನು ಸಾಲಿನಲ್ಲಿ ನಿಲ್ಲಿಸಲಾಗಿತ್ತು. ಛಾಯಾಗ್ರಾಹಕಿ ಮತ್ತು ಅವಳ ಸಹೋದ್ಯೋಗಿ ಬಾಲ ಆರೋಪಿಯನ್ನು ಗುರುತಿಸಿದರು ಎಂದು ಅಪರಾಧ ಪತ್ತೆ ದಳದ ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಗುರುವಾರದವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ನಾಳೆ ನಾಲ್ವರೂ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. `ಆರೋಪಿಗಳನ್ನು ಪುನಃ ಪೊಲೀಸ್ ವಶಕ್ಕೆ ಪಡೆಯುವ ಯೋಚನೆ ಇಲ್ಲ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದ್ದು, ಅಲ್ಲಿ ಆರೋಪಿಗಳ ಪತ್ತೆ ಪರೇಡ್ ನಡೆಸಲಾಗುವುದು' ಎಂದು ಪೊಲೀಸ್ ಆಯುಕ್ತ ಹಿಮಾಂಶು ರಾಯ್ ತಿಳಿಸಿದ್ದಾರೆ.

ಶಂಕಿತ ಆರೋಪಿಗಳ ಬಟ್ಟೆಗಳ ಮೇಲಿನ ಡಿಎನ್‌ಎ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಅವು ಅತ್ಯಾಚಾರಕ್ಕೆ ಒಳಗಾದ ಛಾಯಾಗ್ರಾಹಕಿಯ ಡಿಎನ್‌ಎ ಜೊತೆ ಸಾಮ್ಯತೆ ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.