ಲಕ್ನೌ (ಐಎಎನ್ಎಸ್): ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕಿಂಥ ಪಕ್ಷವು ಬಹುಜನ ಸಮಾಜ ಪಾರ್ಟಿಯೊಂದಿಗೆ ಕಾಂಗ್ರೆಸ್ ಕೈ ಜೋಡಿಸುವುದು ಉತ್ತಮ ಎಂದು ಕೇಂದ್ರ ಉಕ್ಕು ಖಾತೆ ಸಚಿವ ಬೇನಿ ಪ್ರಸಾದ್ ವರ್ಮ ಅಭಿಪ್ರಾಯಪಟ್ಟಿದ್ದಾರೆ.
ಮುಲಾಯಂ ಸಿಂಗ್ ಅವರಿಗೆ ಹೋಲಿಸಿದಲ್ಲಿ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಸಾವಿರ ಪಾಲು ಉತ್ತಮ. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ ಇಳಿದಿರುವುದೇ ಇದಕ್ಕೆ ಸಾಕ್ಷಿ. ಹೀಗಾಗಿ ಬಿಎಸ್ಪಿ ಜತೆಗೂಡಿ ಸರ್ಕಾರ ರಚಿಸುವತ್ತ ಕಾಂಗ್ರೆಸ್ ಚಿಂತನೆ ನಡೆಸಬೇಕಿದೆ ಎಂದು ಕಾಂಗ್ರೆಸ್ ನಾಯಕ ಬೇನಿ ಪ್ರಸಾದ್ ನುಡಿದರು.
ಉತ್ತರ ಪ್ರದೇಶದಲ್ಲಿ ಒಂದೊಮ್ಮೆ ಕಾಂಗ್ರೆಸ್ ಪಕ್ಷ ಉತ್ತಮ ಫಲಿತಾಂಶ ಗಳಿಸದಿದ್ದಲ್ಲಿ ರಾಹುಲ್ ಗಾಂಧಿ ಅವರನ್ನು ಹೊಣೆಗಾರರನ್ನಾಗಿ ಮಾಡುವಂತಿಲ್ಲ ಎಂಬ ದಿಗ್ವಿಜಯ ಸಿಂಗ್ ಅವರ ಹೇಳಿಕೆಯನ್ನು ಬೇನಿ ಪ್ರಸಾದ್ ವರ್ಮ ಸಮರ್ಥಿಸಿಕೊಂಡರು.
ಶನಿವಾರ ಕೊನೆಗೊಂಡ ಏಳನೇ ಹಂತದ ಚುನಾವಣೆ ಫಲಿತಾಂಶ ಮಾ. 6ರಂದು ಹೊರ ಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.