ನವದೆಹಲಿ (ಐಎಎನ್ಎಸ್): ಮೋದಿ ಭ್ರಷ್ಟರಲ್ಲ ಎಂದು ವಿಕಿಲೀಕ್್ಸ ಹೇಳಿರುವುದನ್ನೇ ದೊಡ್ಡದಾಗಿ ಪ್ರಚಾರ ಮಾಡುತ್ತಿರುವ ಬಿಜೆಪಿಯ ದ್ವಿಮುಖ ನೀತಿಯನ್ನು ಬಯಲಿಗೆ ಎಳೆಯಬೇಕಾತ್ತದೆ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
‘ಭ್ರಷ್ಟರನ್ನು ಪಕ್ಷಕ್ಕೆ ಸೇರಿಸಿಕೊಂಡು ಉನ್ನತ ಹುದ್ದೆ ನೀಡಿ ಚುನಾವಣೆ ಟಿಕೆಟ್ ನೀಡುತ್ತಿರುವ ಬಿಜೆಪಿ ಮುಖಂಡರು ತಾವು ಬಹಳ ಪ್ರಾಮಾಣಿಕರು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದು ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಮಂಗಳವಾರ ಇಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
‘ವಿಕಿಲೀಕ್್ಸ ಹೇಳಿರುವುದನ್ನೇ ದೊಡ್ಡ ಪ್ರಶಸ್ತಿ ಎಂಬಂತೆ ಬಿಜೆಪಿ ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.