ADVERTISEMENT

ಬಿಹಾರ: ಮತ್ತೊಬ್ಬ ಸಚಿವೆ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಪಟ್ನಾ: ಕೈಗಾರಿಕೆ ಮತ್ತು ವಿಪತ್ತು ನಿರ್ವಹಣಾ ಸಚಿವೆ ರೇಣು ಕುಶ್ವಹ ಅವರ ರಾಜೀನಾಮೆ­ಯನ್ನು ಅಂಗೀಕರಿಸಿ ರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಲೇಸಿ ಸಿಂಗ್‌ ಅವರನ್ನು ನೂತನ ಸಚಿವೆ ಯಾಗಿ ಸಂಪುಟಕ್ಕೆ ಸೇರಿಸಿ ಕೊಂಡಿದ್ದಾರೆ.

ಲೇಸಿಸಿಂಗ್‌ ಅವರು ಈ ಹಿಂದೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು.

ರೇಣು ಕುಶ್ವಹ ಅವರ ಪತಿ ವಿಜಯ್‌ ಸಿಂಗ್‌ ಪೂರ್ಣಿಯಾದಲ್ಲಿ  ಬಿಜೆಪಿ ಸೇರ್ಪಡೆ­ಯಾಗಿ­ದ್ದರು. ಈ ಹಿನ್ನೆಲೆಯಲ್ಲಿ ರೇಣು ಅವರು ಸೋಮವಾರ ಸಂಜೆಯೇ ಮುಖ್ಯ­ಮಂತ್ರಿಗಳಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದರು.  ನಿತೀಶ್‌­­ಕುಮಾರ್‌ ಅವರ ಸಂಪುಟದಿಂದ ಹೊರ­ಬಂದ ಎರಡನೇ ಸಚಿವೆಯಾಗಿ­ದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.