ADVERTISEMENT

ಬುಡಕಟ್ಟು ಭೂಮಿ ಮಾರಾಟ: ಐಎಎಸ್ ಅಧಿಕಾರಿ ಅಮಾನತು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 10:00 IST
Last Updated 11 ಅಕ್ಟೋಬರ್ 2011, 10:00 IST

ರಾಯ್‌ಪುರ್(ಐಎಎನ್‌ಎಸ್): ಬುಡಕಟ್ಟು ಜನರ ಭೂಮಿಯನ್ನು ಅಕ್ರಮವಾಗಿ ಇತರೆ ಜನರಿಗೆ ಮಾರಾಟ ಮಾಡಿದ ಆರೋಪದ ಮೇಲೆ ಮುಖ್ಯ ಕಾರ್ಯದರ್ಶಿ ಶ್ರೇಣಿಯ ಐಎಎಸ್ ಅಧಿಕಾರಿಯೊಬ್ಬರನ್ನು ಛತ್ತೀಸ್‌ಗಡ ಸರ್ಕಾರವು ಸೇವೆಯಿಂದ ಅಮಾನತುಗೊಳಿಸಿದೆ ಎಂದು ಉನ್ನತ ಮೂಲಗಳು ಮಂಗಳವಾರ ಇಲ್ಲಿ ತಿಳಿಸಿವೆ.

ಕಳೆದ 1978ರ ಬ್ಯಾಚ್‌ನಲ್ಲಿ ನೇಮಕಗೊಂಡ ಟಿ. ರಾಧಾಕೃಷ್ಣನ್ ಅವರನ್ನು ಸೋಮವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಐಎಎಸ್ ಶ್ರೇಣಿಯ ಅಧಿಕಾರಿಯೊಬ್ಬರು ಅಮಾನತುಗೊಂಡ ಈ ಪ್ರಕರಣ, ರಾಜ್ಯದಲ್ಲಿನ ಮೊದಲ ಪ್ರಕರಣ ಎನ್ನಲಾಗಿದೆ.

ಜನವರಿ 2008ರಿಂದ 2011ರ ಅವಧಿಯಲ್ಲಿ ಕಂದಾಯ ಮಂಡಳಿಯ ಅಧ್ಯಕ್ಷರಾಗಿದ್ದ  ಐಎಎಸ್  ಅಧಿಕಾರಿ ಟಿ. ರಾಧಾಕೃಷ್ಣನ್ ಅವರು, ಬುಡಕಟ್ಟು ಜನರಿಗೆ ಸೇರಿದ್ದ ಭೂಮಿಯನ್ನು ಬೇರೆ ಜನರಿಗೆ ಮಾರಾಟ ಮಾಡಿದ್ದರೆಂದು ಆರೋಪಿಸಲಾಗಿತ್ತು. ಹಿರಿಯ ಅಧಿಕಾರಿಯೊಬ್ಬರಿಂದ ಇಲಾಖಾ ತನಿಖೆಯು ನಡೆದಾಗ ಮೇಲ್ನೋಟಕ್ಕೆ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.