ಲಖನೌ(ಪಿಟಿಐ): ಸಾಮಾನ್ಯವಾಗಿ ವಿಧವೆಯರು ಹೋಳಿಗಳಂತಹ ಸಂಭ್ರಮದ ಆಚರಣೆಗಳಲ್ಲಿ ಭಾಗವಹಿಸುವುದನ್ನು ಸಂಪ್ರದಾಯ ವಿರೋಧಿ ಎಂದು ಪರಿಗಣಿಸಲಾಗುತ್ತದೆ. ಆದರೆ ಮಾರ್ಚ್ 14ರಂದು ಬೃಂದಾವನದಲ್ಲಿ ಸಾವಿರಾರು ವಿಧವೆಯರು ಸಾಮಾಜಿಕ ಕಟ್ಟಳೆಗಳನ್ನು ಮುರಿದು ಹೋಳಿಹಬ್ಬದ ಬಣ್ಣದ ಆಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಳೆದ ವರ್ಷ ಅವರು ಪರಸ್ಪರ ಹೂದಳಗಳನ್ನು ಎರಚಿಕೊಳ್ಳುವುದರ ಮೂಲಕ ಹೋಳಿಹುಣ್ಣಿಮೆಯನ್ನು ಆಚರಿಸಿದ್ದರು.
ಬೃಂದಾವನದ ಮೀರಾ ಸಹಭಾಗಿನಿ ಸದನದಲ್ಲಿ ಮಾರ್ಚ್ 14ರಂದು ಸಾವಿರಾರು ವಿಧವೆಯರು ರಂಗು ಎರಚುವ ಮೂಲಕ ಹೋಳಿ ಆಚರಿಸಲಿದ್ದಾರೆ.
ವಿಧವೆಯರ ಪರಿಸ್ಥಿತಿ ಸುಧಾರಿಸಿ ಅವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿರುವ ‘ಸುಲಭ್ ಇಂಟರ್ನ್ಯಾಷನಲ್’ ಎಂಬ ಸಂಸ್ಥೆಯು ಇದನ್ನು ಆಯೋಜಿಸಿದೆ.
‘ಬೃಂದಾವನದಲ್ಲಿ ಆಚರಿಸಲಾಗುವ ಹೋಳಿ ಹಬ್ಬ, ಹಳೆಯ ಕಾಲದ ಸಂಪ್ರದಾಯದ ಸಂಕೋಲೆಯಿಂದ ವಿಧವೆಯರನ್ನು ಬಿಡುಗಡೆಗೊಳಿಸುವ ಪ್ರಯತ್ನವಾಗಿದೆ. ಅವರು ಕೇವಲ ಹೋಳಿ ಆಡುವುದಷ್ಟೇ ಅಲ್ಲ. ಅದರ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಲಿದ್ದಾರೆ’ ಎಂದು ‘ಸುಲಭ್ ಇಂಟರ್ನ್ಯಾಷನಲ್’ನ ಸಂಸ್ಥಾಪಕ ಬಿಂದೇಶ್ವರ್ ಪಾಠಕ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.