ADVERTISEMENT

ಬೆಂಗಳೂರಿನ ‘ಹಿಂದ್‌ ಹೈ’ಗೆ ರಾಷ್ಟ್ರೀಯ ತಂತ್ರಜ್ಞಾನ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 11 ಮೇ 2018, 19:30 IST
Last Updated 11 ಮೇ 2018, 19:30 IST

ನವದೆಹಲಿ: ರಾಷ್ಟ್ರೀಯ ತಂತ್ರಜ್ಞಾನ ದಿನದ ಅಂಗವಾಗಿ ನೀಡುವ ಪ್ರಶಸ್ತಿ ವಿಜೇತ ಕಂಪನಿಗಳಲ್ಲಿ ಬೆಂಗಳೂರಿನ ಹಿಂದ್‌ ಹೈ ವ್ಯಾಕ್ಯೂಮ್‌ ಕಂಪನಿಯೂ ಸೇರಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಈ ವರೆಗೆ ಆಮದಿನ ಮೇಲೆ ಅವಲಂಬಿತವಾಗಿದ್ದ ವಿಶಿಷ್ಟ ಸಾಧನವೊಂದನ್ನು ಈ ಕಂಪನಿಯು ಪೂರೈಸುತ್ತಿದೆ.

ಟಿ.ವಿ., ಕಂಪ್ಯೂಟರ್‌ಗಳಲ್ಲಿ ಬಳಸುವ ಸರ್ಕಿಟ್‌ಗಳು ಬಾಹ್ಯಾಕಾಶದ ಬಿರುಸು ವಾತಾವರಣದಲ್ಲಿ ಉಳಿಯುವುದು ಸಾಧ್ಯವಿಲ್ಲ. ಹಾಗಾಗಿ, ಉಪಗ್ರಹಗಳಲ್ಲಿ ಬಳಸುವ ಸರ್ಕಿಟ್‌ಗಳಿಗೆ ಮೂರು ಪದರಗಳುಳ್ಳ ಅತ್ಯುನ್ನತ ಗುಣಮಟ್ಟದ ಸಾಧನವನ್ನು ಈಗ ಇಸ್ರೊಕ್ಕೆ ಹಿಂದ್‌ ಹೈ ಒದಗಿಸುತ್ತಿದೆ.

‘ವರ್ಷಕ್ಕೆ 15 ಸಾವಿರ ಸರ್ಕಿಟ್‌ಗಳನ್ನು ಇಸ್ರೊಕ್ಕೆ ಪೂರೈಸುತ್ತಿದ್ದೇವೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಸಾಖಾಮುರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನೀಡುವ ಈ ಪ್ರಶಸ್ತಿ ಮೊತ್ತ ₹15 ಲಕ್ಷ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.