ADVERTISEMENT

ಬೆಂಗಳೂರು ಸ್ಫೋಟ: ಮತ್ತೊಬ್ಬನ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 20:12 IST
Last Updated 25 ಏಪ್ರಿಲ್ 2013, 20:12 IST

ಚೆನ್ನೈ: ಬೆಂಗಳೂರು ಬಾಂಬ್ ಸ್ಫೋಟಕ್ಕೆ  ಸಂಬಂಧಿಸಿದಂತೆ `ಗೂಂಡಾ ಕಾಯ್ದೆ' ಅಡಿ ಬಂಧನಕ್ಕೊಳಗಾಗಿ ತಮಿಳುನಾಡಿನ ಸಲೇಂ ಕೇಂದ್ರ ಕಾರಾಗೃಹದಲ್ಲಿದ್ದ ಸಲೀಂ ಎಂಬುವವನ್ನು ಕರ್ನಾಟಕ ಪೊಲೀಸರು ಗುರುವಾರ  ವಿಚಾರಣೆ ನಡೆಸಿದರು.

ಸಲೀಂ, ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ಅಲ್-ಉಮ್ಮಾ ಸಂಘಟನೆಯ ಕಾರ್ಯಕರ್ತ ಆರೋಪಿ ಕಿಚನ್ ಬಹುರಿಯಾ ಸಂಬಂಧಿ. ಪೊಲೀಸ್ ಅಧಿಕಾರಿಗಳ ಪ್ರಕಾರ, ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ.

ಈ ನಡುವೆ ರಹಸ್ಯವಾಗಿ ಆಸ್ಟ್ರೇಲಿಯಾಕ್ಕೆ ವಲಸೆ ಹೊರಟಿದ್ದ ತಮಿಳುನಾಡಿನ 67 ಶ್ರೀಲಂಕಾ ತಮಿಳು ನಿರಾಶಿತರನ್ನು ಬುಧವಾರ ರಾತ್ರಿ ಮಂಗಳೂರಿನಲ್ಲಿ  ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕರ್ನಾಟಕ ಪೊಲೀಸರು ನೀಡಿದ ಮಾಹಿತಿ ಆಧರಿಸಿ, ತಮಿಳುನಾಡಿನ ಅಪರಾಧ ವಿಭಾಗದ ಪೊಲೀಸರು ಮಂಗಳೂರಿಗೆ ಆಗಮಿಸಿ, ಪೊಲೀಸರಿಂದ ವಿವರಣೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.