ಭುಜ್ (ಪಿಟಿಐ): ಭಾರತೀಯ ವಾಯು ಪಡೆಗೆ ಸೇರಿದ ಚಾಲಕ ರಹಿತ ‘ಹೆರನ್’ ಹೆಸರಿನ ಬೇಹುಗಾರಿಕೆ ವಿಮಾನ ಪಟ್ಟಣದ ಹೊರವಲಯದಲ್ಲಿ ಬುಧವಾರ ಪತನಗೊಂಡಿದೆ ರಕ್ಷಣಾ ಪಡೆಯ ಅಹಮದಾಬಾದ್ ಘಟಕದ ಸಾರ್ವಜನಿಕ ಸಂಪರ್ಕಾಧಿಕಾರಿ ಅಭಿಷೇಕ್ ಹೇಳಿದ್ದಾರೆ.
ಈ ವಿಮಾನದ ಮೊತ್ತ ₨80 ಕೋಟಿ. ಪತನದ ಕಾರಣಗಳು ತನಿಖೆಯ ನಂತರ ಗೊತ್ತಾಗಲಿದೆ ಎಂದು ಅವರು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಭುಜ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎನ್.ಪಟೇಲ್ ಹೇಳಿದ್ದಾರೆ. ಇಸ್ರೇಲ್‌ನಿಂದ ಈ ವಿಮಾನವನ್ನು ಖರೀದಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.