ಮುಂಬೈ: ಕಳೆದೆರಡು ತಿಂಗಳ ಅವಧಿಯಲ್ಲಿ ಇಲ್ಲಿನ 12 ಪೊಲೀಸರು ಸೇರಿದಂತೆ ಒಟ್ಟು 29 ವ್ಯಕ್ತಿಗಳ ಆ್ಯಕ್ಸಿಸ್ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿರುವ ಸೈಬರ್ ಚೋರರು ರೂ 13 ಲಕ್ಷ ನಗದು ಲಪಟಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬ್ರಿಟನ್ ಮತ್ತು ಗ್ರೀಸ್ ರಾಷ್ಟ್ರಗಳ ಎಟಿಎಂಗಳಿಂದ ಯೂರೊ ಕರೆನ್ಸಿಯಲ್ಲಿ ಈ ನಗದು ಪಡೆಯಲಾಗಿದೆ. ತಮ್ಮ ಖಾತೆಗಳಿಂದ ಹಣ ಪಡೆದಿರುವ ಬಗ್ಗೆ ಪೊಲೀಸರ ಮೊಬೈಲ್‌ಗಳಿಗೆ ಎಸ್‌ಎಂಎಸ್ ಬಂದ ನಂತರ ಈ ಕಿಡಿಗೇಡಿತನ ಬಹಿರಂಗಗೊಂಡಿತು. ಎಸ್‌ಎಂಎಸ್ ಬಂದ ತಕ್ಷಣ ಪೊಲೀಸರು ಹತ್ತಿರದ ಎಟಿಎಂ ಗಳಿಗೆ ಹೋಗಿ ಪರೀಕ್ಷಿಸಿದಾಗ ಅವರ ಖಾತೆಗಳಿಂದ ಹಣ ತೆಗೆದಿರುವುದು ಖಚಿತಪಟ್ಟಿತು. ಡೆಬಿಟ್ ಕಾರ್ಡ್‌ಗಳನ್ನು ಪಡಿಯಚ್ಚಿನಂತೆ ನಕಲು ಮಾಡಿ ಈ ದುಷ್ಕೃತ್ಯ ಎಸಗಿರಬಹುದು ಎಂಬುದು ಪೊಲೀಸರ ಅಂದಾಜು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.