ಫುಲ್ಲೆರ್‌ಟನ್, ಅಮೆರಿಕ: ಭಾರತದ ಅಜಯ್ ಜಯರಾಮ್, ಅಮೆರಿಕ ಓಪನ್ ವಿಶ್ವ ಟೂರ್ ಸೂಪರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಜಯರಾಮ್ 19–21, 21–12, 21–16ರಲ್ಲಿ ಬ್ರೆಜಿಲ್‌ನ ಯಗೊರ್ ಕೊಯೆಲ್ಹೊ ಅವರನ್ನು ಮಣಿಸಿದರು. ಈ ಹೋರಾಟ 50 ನಿಮಿಷ ನಡೆಯಿತು. ಮುಂದಿನ ಸುತ್ತಿನಲ್ಲಿ ಅವರು, ಕೊರಿಯಾದ ಹಿಯೊ ಕ್ವಾಂಗ್ ಹೀ ವಿರುದ್ಧ ಸೆಣಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.