ADVERTISEMENT

ಬ್ಲೂವೇಲ್‌ಗೆ ಕಡಿವಾಣಕ್ಕೆ ತಜ್ಞರ ಸಮಿತಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 19:30 IST
Last Updated 13 ಅಕ್ಟೋಬರ್ 2017, 19:30 IST
ಬ್ಲೂವೇಲ್‌ಗೆ ಕಡಿವಾಣಕ್ಕೆ ತಜ್ಞರ ಸಮಿತಿ
ಬ್ಲೂವೇಲ್‌ಗೆ ಕಡಿವಾಣಕ್ಕೆ ತಜ್ಞರ ಸಮಿತಿ   

ನವದೆಹಲಿ: ಹಲವಾರು ಅಮಾಯಕ ಮಕ್ಕಳ ಜೀವಗಳನ್ನು ಬಲಿ ಪಡೆಯುತ್ತಿರುವ ‘ಬ್ಲೂ ವೇಲ್ ಚಾಲೆಂಜ್‌’ ಮೊಬೈಲ್‌ ಆಟದ ಹಾವಳಿ ತಡೆಯಲು ತಜ್ಞರ ಸಮಿತಿ ರಚಿಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಬ್ಲೂ ವೇಲ್‌ನಂತಹ ಮಾರಣಾಂತಿಕ ಮೊಬೈಲ್‌ ಆಟಗಳಿಂದ ಮಕ್ಕಳನ್ನು ರಕ್ಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಬಗ್ಗೆ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಈ ಆಟಕ್ಕೆ ಮಕ್ಕಳು ಬಲಿಯಾಗದಂತೆ ತಡೆಯುವ ತಂತ್ರಜ್ಞಾನ (ಫೈರ್‌ವಾಲ್‌) ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ತಜ್ಞರ ಸಮಿತಿಗೆ ಒಪ್ಪಿಸಿ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಕೇಂದ್ರಕ್ಕೆ ಸೂಚಿಸಿದೆ. ಇದಕ್ಕೆ ಸಂಬಂಧಿಸಿ ವರದಿಯನ್ನು ಇದೇ 27ರ ಒಳಗಾಗಿ ಸಲ್ಲಿಸುವಂತೆ ಹೇಳಿದೆ.

ADVERTISEMENT

ಬ್ಲೂ ವೇಲ್‌ನಂತ ಮಾರಣಾಂತಿಕ ಆಟಗಳು ಮಕ್ಕಳ ಕೈಗೆ ಸಿಗದಂತೆ ಆ ಸೇವೆಯನ್ನು ಸ್ಥಗಿತಗೊಳಿಸಲು ಖಾಸಗಿ ಅಂತರ್ಜಾಲ ಸೇವಾದಾತ ಸಂಸ್ಥೆಗಳಿಗೆ ಷರತ್ತು ವಿಧಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ವಕೀಲೆ ಮತ್ತು ಸಾಮಾಜಿಕ ಹೋರಾಟಗಾರ್ತಿ ಸ್ನೇಹಾ ಕಲಿಟಾ ಎಂಬುವರು ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.