ADVERTISEMENT

ಭದ್ರತಾ ಮಂಡಳಿ: ಮಾರ್ಚ್‌ನಲ್ಲಿ ಮತ್ತೆ ಮಾತುಕತೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 18:30 IST
Last Updated 20 ಫೆಬ್ರುವರಿ 2011, 18:30 IST

ನವದೆಹಲಿ (ಐಎಎನ್‌ಎಸ್): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗೆ ಸಂಭಂಧಿಸಿದ ಸರ್ಕಾರಗಳ ಮಧ್ಯೆಯ ಮುಂದಿನ ಮಾತುಕತೆಯು ಮಾರ್ಚ್ ಮೊದಲ ವಾರದಲ್ಲಿ ನಡೆಯಲಿದೆ.

ಮೂರು ಪುಟಗಳ ಪರಿಷ್ಕೃತ ದಾಖಲೆ ಸಿದ್ಧವಾಗಿದ್ದು, ಈ ದಾಖಲೆಯ ಆಧಾರದ ಮೇಲೆ ಚರ್ಚೆ ನಡೆಯಲಿದೆ. ಎಲ್ಲಾ 192 ಸದಸ್ಯ ರಾಷ್ಟ್ರಗಳ ಸಲಹೆ ಮತ್ತು ಸದ್ಯದ ಅಭಿಪ್ರಾಯಗಳನ್ನು ಈ ದಾಖಲೆ ಪತ್ರ ಹೊಂದಿರುತ್ತದೆ ಎಂದು ಅಂತರ್ ಸರ್ಕಾರ ಸಂಧಾನ ಮಾತುಕತೆಯ ಮುಖ್ಯಸ್ಥ ಜಾಹಿರ್ ತನಿನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.