ADVERTISEMENT

ಭವಿಷ್ಯದ ಕಾರ್ಯತಂತ್ರಗಳಿಗಾಗಿ ಅಣ್ಣಾ ತಂಡದ ಸಭೆ ?

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 8:15 IST
Last Updated 22 ಏಪ್ರಿಲ್ 2012, 8:15 IST

ನವದೆಹಲಿ (ಐಎಎನ್‌ಎಸ್): ಪ್ರಬಲ ಲೋಕಪಾಲ್ ಮಸೂದೆ ಹಾಗೂ ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಬಾಬಾ ರಾಮದೇವ್ ಅವರೊಂದಿಗೆ ಅಣ್ಣಾ ಕೈಜೋಡಿಸಿರುವ ವಿಷಯ ಒಳಗೊಂಡಂತೆ ಭವಿಷ್ಯದ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ತಂಡದ ಸದಸ್ಯರು ಭಾನುವಾರ ಸಭೆ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೊಯಿಡಾದಲ್ಲಿ ನಡೆಯುವ ಸಭೆಯಲ್ಲಿ ಅಣ್ಣಾ ಅವರೊಂದಿಗೆ ಅರವಿಂದ್ ಕೇಜ್ರಿವಾಲ್, ಪ್ರಶಾಂತ್ ಭೂಷಣ್ ಹಾಗೂ ಕಿರಣ್ ಬೇಡಿ ಅವರು ಭಾಗವಹಿಸಲಿದ್ದು, ಈ ವಾರದಲ್ಲಿ ಪ್ರಾರಂಭವಾಗುವ ಸಂಸತ್ ಅಧಿವೇಶನದಲ್ಲಿ ಜನಲೋಕಪಾಲ್ ಮಸೂದೆ ಜಾರಿಗೊಳಿಸುವಂತೆ ಒತ್ತಾಯ ಹೇರುವ ಕಾರ್ಯತಂತ್ರಗಳ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ರಾಮದೇವ್ ಅವರೊಂದಿಗೆ ಅಣ್ಣಾ ಅವರು ಕೈಜೋಡಿಸಿದ ಕಾರಣಕ್ಕೆ ಇತ್ತೀಚೆಗೆ ಅಣ್ಣಾ ತಂಡದ ಪ್ರಮುಖ ಸದಸ್ಯರು ಅಸಮಾಧಾನಗೊಂಡಿದ್ದರು ಎಂಬ ವರದಿಗಳು ಕೇಳಿ ಬಂದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.