ADVERTISEMENT

ಭಾಗವತ್ ಭೇಟಿ ಮಾಡದ ಅಡ್ವಾಣಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 14:25 IST
Last Updated 19 ಜೂನ್ 2013, 14:25 IST
ಭಾಗವತ್ ಭೇಟಿ ಮಾಡದ ಅಡ್ವಾಣಿ
ಭಾಗವತ್ ಭೇಟಿ ಮಾಡದ ಅಡ್ವಾಣಿ   

ನವದೆಹಲಿ (ಐಎಎನ್‌ಎಸ್): ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರ ಮಧ್ಯ ಬುಧವಾರ ನಡೆಯಬೇಕಾಗಿದ್ದ ಸಭೆಯು ಅಡ್ವಾಣಿ ಅವರ ಅನಾರೋಗ್ಯದ ನಿಮಿತ್ತ ರದ್ದುಗೊಂಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಗೋವಾ ಕಾರ್ಯಕಾರಣಿ ನಂತರ ಪಕ್ಷದ ಎಲ್ಲ ಪ್ರಮುಖ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದ ಅಡ್ವಾಣಿ ಅವರು ನಂತರದಲ್ಲಿ ಭಾಗವತ್ ಅವರ ಸಲಹೆಯಂತೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಬುಧವಾರ ಉಭಯ ಮುಖಂಡರು ಭೇಟಿಯಾಗಲು ತೀರ್ಮಾನಿಸಿದ್ದರು. ಆದರೆ ಅಡ್ವಾಣಿ ಅವರ ಅನಾರೋಗ್ಯದ ಕಾರಣ ಅವರು ಭಾಗವತ್ ಭೇಟಿಗೆ ಬರಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ಹೇಳಿವೆ.

ಭಾಗವತ್ ಇದಕ್ಕೂ ಮೊದಲು ಬಿಜೆಪಿಯ ಮಾಜಿ ಅಧ್ಯಕ್ಷ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.